ಕಾಸರಗೋಡು: ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಖಾಸಗಿ ಬಸ್‍ಗಳ ಸ್ಥಿತಿ ಶೋಚನೀಯವಾಗಿದ್ದು ಸರ್ಕಾರ ಯಾವುದೇ ಪರಿಹಾರ ಕ್ರಮ ಕೈಗೊಳ್ಳದ ಕಾರಣ ಖಾಸಗಿ ಬಸ್ ಮಾಲೀಕರು ಪ್ರತಿಭಟನೆಗಿಳಿದು ಗಮನ ಸೆಳೆದರು. ಮುಕಾಂಬಿಕಾ ಟ್ರಾವೆಲ್ಸ್ ಮಾಲೀಕ ವಿದ್ಯಾಧರನ್ ಕಾಟ್ಟಾರ್ ಉಚಿತ ಬಸ್ ವ್ಯವಸ್ಥೆ ಮೂಲಕ ವಿನೂತನ ಪ್ರತಿಭಟನೆಗಿಳಿಯುವ ಮೂಲಕ ಇಂದು ಸೆಳೆವರು.
ಮುಕಾಂಬಿಕಾ ಟ್ರಾವೆಲ್ಸ್ ಪಾಣತ್ತೂರು-ಕಾಞÂಂಗಾಡ್ ರೂಟ್ ಮತ್ತು ಕಾಞÂಂಗಾಡ್ ಕೊನ್ನಕ್ಕಾಡ್ ರೂಟುಗಳಲ್ಲಿ ಎರಡು ಬಸ್‍ಗಳು ಉಚಿತ ಸಂಚಾರ ನಡೆಸಲಿವೆ. ಬುಧವಾರ ಈ ರಸ್ತೆಗಳಲ್ಲಿ ಪ್ರತಿಭಟನಾರ್ಥ ಉಚಿತ ಸಂಚಾರ ನಡೆಸಲಿವೆ.
ಕೋವಿಡ್ ಬಿಕ್ಕಟ್ಟಿನಿಂದ ಬಸ್ ಕಾರ್ಮಿಕರು ಹೆಚ್ಚು ಸಂಕಷಷ್ಟಕ್ಕೊಳಗಾಗಿದ್ದಾರೆ. ಕಾರ್ಮಿಕರ ಬದುಕು ಹದಗೆಟ್ಟು ತೀವ್ರ ಚಿಂತಾಜನಕವಾಗಿದೆ. ಸರ್ಕಾರ ತಕ್ಷಣ ಈ ಬಗ್ಗೆ ಏನಾದರೊಂದು ನೆರವು ನೀಡುವ ನಿಟ್ಟಿನಲ್ಲಿ ಗಮನ ಸೆಳೆಯಲು ಉಚಿತ ಸೇವೆಯ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮಾಲೀಕ ವಿದ್ಯಾಧರನ್ ಹೇಳಿರುವರು. ಸರ್ಕಾರದ ಎಲ್ಲಾ ನಿರ್ದೇಶನಗಳನ್ನು ಅನುಸರಿಸಿ ಕೋವಿಡ್ ಲಾಕ್ ಡೌನ್ ಬಳಿಕ ಮಲೆನಾಡ ಪ್ರದೇಶದಲ್ಲಿ ಮೊದಲ ಬಾರಿಗೆ ಮೂಕಾಂಬಿಕಾ ಟ್ರಾವೆಲ್ಸ್ ಮೊದಲ ಸೇವೆ ನೀಡುತ್ತಿದೆ.
ಪ್ರತಿ ತಿಂಗಳ ಮೊದಲ ದಿನ ಕಾರುಣ್ಯ ಪ್ರಯಾಣ ಎಂಬ ಯೋಜನೆಯ ಮೂಲಕ ಜಿಲ್ಲೆಯ ನಿರ್ಗತಿಕ ರೋಗಿಗಳಿಗೆ ಒಂದು ದಿನದ ತಮ್ಮ ಎರಡು ಬಸ್ ಗಳ ಒಟ್ಟು ಸಂಗ್ರಹವನ್ನು ದಾನಗೈಯ್ಯುವ ಮೂಲಕ ಅನೇಕ ವರ್ಷಗಳಿಂದ ವಿದ್ಯಾಧರನ್ ಜನಪರ ಸೇವಕರಾಗಿ ಗುರುತಿಸಿಕೊಂಡವರಾಗಿದ್ದಾರೆ. ಇತರ ಜನಪರ ಕಾಳಜಿಯ ಸೇವೆಗಳಲ್ಲೂ ತೊಡಗಿಸಿಕೊಂಡಿರುವ ಇವರು ಕುಡಿಯುವ ನೀರು, ಆಹಾರ ವಿತರಣೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವರು. ಬಸ್ ಸೇವೆಯ ಮೂಲಕ ಇನ್ನಷ್ಟು ಸೇವಾ ಚಟುವಟಿಕೆಗಳನ್ನು ಬಡಬಗ್ಗರಿಗಾಗಿ ನಿರ್ವಹಿಸಲು ಉತ್ಸುಕನಾಗಿರುವೆ. ಆದರೆ ಕೊರೊನಾ ಜಟಿಲ ಸಂದರ್ಭ ಸರ್ಕಾರ ಬಸ್ ಸೇವೆಗಳಂತಹ ತುರ್ತು ಅಗತ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಏನಾದರೊಂದು ಉಪಕ್ರಮಗಳಿಗೆ ಮುಂದಾಗಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲು ಉಚಿತ ಸೇವೆಯ ಪ್ರತಿಭಟನೆ ನಡೆಸಬೇಕಾಗುತ್ತಿದೆ ಎಂದು ತಿಳಿಸಿರುವರು.


