ಕಾಸರಗೋಡು: ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಫಸ್ಟ್ ಬೆಲ್ ಆನ್ ಲೈನ್ ತರಗತಿಗಳು ಇಂದಿನಿಂದ(ಜೂ.17) ಕನ್ನಡ ಮಾಧ್ಯದಲ್ಲೂ ಲಭ್ಯವಾಗಲಿವೆ. ಈ ಸಂಬಂಧ ಕಾಸರಗೋಡು ಜಿಲ್ಲೆಯಲ್ಲಿ ಸಿದ್ಧತೆ ಪುರ್ಣಗೊಂಡಿದೆ.
ಕೈಟ್ ಕಾಸರಗೋಡು ಆರಂಭಿಸಿರುವ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ತರಗತಿಗಳು ಲಭಿಸಲಿವೆ. ವಿಳಾಸ: www.youtube/c/kitekasaragod
ಈ ಚಾನೆಲ್ ನ ಔಪಚಾರಿಕ ಉದ್ಘಾಟನೆ ಇಂದು(ಜೂ.17) ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡುವರು. ತದನಂತರ ಪ್ರಸಾರ ಆರಂಭಗೊಳ್ಳಲಿದೆ. ತಲಾ ಅರ್ಧ ತಾಸಿನ ಸರಣಿಗಳು ಪ್ರತಿ ತರಗತಿಯಾಗಿ ಪ್ರಸಾರಗೊಳ್ಳುವುವು. ಪ್ರೌಢಶಾಲಾ ವಿಭಾಗದಲ್ಲಿ ಪ್ರತಿ ತರಗತಿ ತಲಾ ಪ್ರತಿ ಎರಡು ವಿಷಯಗಳಲ್ಲಿ ಪ್ರಸಾರಗೊಳ್ಳಲಿದೆ. ಪ್ರಾಥಮಿಕ ವಿಭಾಗದಲ್ಲಿ ದಿನ ಬಿಟ್ಟು ದಿನ ಹಿರಿಯ ಪ್ರಾಥಮಿಕ, ಕಿರಿಯ ಪ್ರಾಥಮಿಕ ತರಗತಿಗಳ ವಿಷಯಗಳು ಪರ್ಯಾಯ ವ್ಯವಸ್ಥೆಯಲ್ಲಿ ಪ್ರಸಾರವಾಗಲಿವೆ. ಮೊದಲ ದಿನ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ವಿಭಾಗಗಳ ತರಗತಿಗಳು ಲಭಿಸಲಿವೆ.
ಇಂದು ಬೆಳಗ್ಗೆ 11 ಗಂಟೆಗೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಫಿಸಿಕ್ಸ್, 11.30ಕ್ಕೆ ಕೆಮೆಸ್ಟ್ರಿ, ಮಧ್ಯಾಹ್ನ 12 ಗಂಟೆಗೆ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಫಿಸಿಕ್ಸ್, 12.30ಕ್ಕೆ ಸೋಷ್ಯಲ್ ಸಯನ್ಸ್, ಮಧ್ಯಾಹ್ನ 1 ಗಂಟೆಗೆ 8 ನೇ ತರಗತಿ ವಿದ್ಯಾರ್ಥಿಗಳಿಗೆ ಬಯಾಲಜಿ, 1.30ಕ್ಕೆ ಕನ್ನಡ, ಮಧ್ಯಾಹ್ನ 2 ಗಂಟೆಗೆ 5ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ, 2.30 ಗಂಟೆಗೆ 6 ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಬಿ.ಟಿ., 3 ಗಂಟೆಗೆ 7ನೇ ತರಗತಿ ವಿದ್ಯಾರ್ರಥಿಗಳಿಗೆ ಬೇಸಿಕ್ ಸಯನ್ಸ್ ಪ್ರಸಾರಗೊಳ್ಳಲಿದೆ. 3.30 ರಿಂದ ತರಗತಿಗಳ ಪುನರ್ ಪ್ರಸಾರ ನಡೆಯಲಿದೆ.
ಈ ಸಂಬಂಧ ಅಗತ್ಯವಿರುವ ವೀಡಿಯೋ ತರಗತಿಗಳ ನಿರ್ಮಾಣ(ಚಿತ್ರೀಕರಣ) ಕೈಟ್ ನ ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ನಡೆಯುತ್ತಿದೆ. ಸಮಗ್ರ ಶಿಕ್ಷಣ ಕೇರಳ, ಡಯಟ್ ಕಾಸರಗೋಡುಗಳ ಅಕಾಡೆಮಿಕ್ ಬೆಂಬಲದೊಂದಿಗೆ ಈ ಚಟುವಟಿಕೆಗಳು ನಡೆಯುತ್ತಿವೆ. ಜೊತೆಗೆ ಕೇರಳ ವಿಷನ್ ಕೇಬಲ್ ನೆಟ್ ವರ್ಕ್ ನ 46 ನಂಬ್ರ ಚಾನೆಲ್ ನಲ್ಲೂ ಇದು ಲಭ್ಯವಿರುವುದು. ಜಿಲ್ಲೆಯ ಎಲ್ಲ ಕೇಬಲ್ ನೆಟ್ ವರ್ಕ್ ನಲ್ಲೂ ಈ ಚಾನೆಲ್ ಲಭ್ಯವಿರುವುದು.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಧಿಕಾರಿ ವಿಶೇಷ ಕಳಕಳಿಯೊಂದಿಗೆ ಜಿಲ್ಲೆಯ ಕೇಬಲ್ ಟಿ.ವಿ. ಆಪರೇಟರ್ ಗಳ ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಪರಿಣಾ ಕೇರಳ ವಿಷನ್ ನೆಟ್ ವರ್ಕ್ ಮೂಲಕ ಕೇಬಲ್ ಟಿ.ವಿ. ಮೂಲಕವೂ ಈ ತರಗತಿಗಳ ಪ್ರಸಾರ ನಡೆಯಲಿವೆ. ಕೇರಳ ವಿಷನ್ ಕೇಬಲ್ ನೆಟ್ ವರ್ಕ್ ನಲ್ಲಿ 46 ನಂಬ್ರದಲ್ಲಿ ಈ ಸೌಲಭ್ಯ ಲಭಿಸಲಿದೆ. ಕೇರಖ ವಿಷನ್ ಕೇಬಲ್ ನೆಟ್ ವರ್ಕ್ ಸಂಸ್ಥೇಯ ಈ ಕೊಡುಗೆ ಮಾದರಿಯಾದುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಕೈಟ್ ಜಿಲ್ಲಾ ಸಂಚಾಲಕ ಎಂ.ಪಿ.ರಾಜೇಶ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಕೇಬಲ್ ಆಪರೇಟರ್ಸ್ ಅಸೋಸಿಯೇಶನ್ ಜಿಲ್ಲಾ ಕಾರ್ಯದರ್ಶಿ ಎಂ.ಆರ್.ಅಜಯನ್, ಕೇರಳ ವಿಷನ್ ನಿರ್ದೇಶಕ ಶುಕೂರ್ ಕೋಳಿಕ್ಕರ ಉಪಸ್ಥಿತರಿದ್ದರು.



