ಕಾಸರಗೋಡು: ಜಿಲ್ಲೆಯಲ್ಲಿ ವಾಚನಾ ಸಪ್ತಾಹ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಜಿಲ್ಲಾ ಗ್ರಂಥಾಲಯ ಮಂಡಳಿ ವತಿಯಿಂದ ಗ್ರಂಥಾಲಯ ಸ್ಥಾಪನೆ ಆಂದೋಲನ ನೇತಾರ ಪಿ.ಎನ್.ಪಣಿಕ್ಕರ್ ಅವರ ಸ್ಮೃತಿ ದಿನಾಚರಣೆಯಾಗಿರುವ ಜೂ.19 ರಿಂದ ಐ.ವಿ.ದಾಸ್ ಅವರ ಜನ್ಮದಿನಾಚರಣೆಯಾಗಿರುವ ಜು.7 ವರೆಗೆ ಪಕ್ಷಾಚರಣೆ ನಡೆಯಲಿದೆ.
ಕೋವಿಡ್ ಸಂಹಿತೆಗಳನ್ನು ಪಾಸಲಿಸಿಕೊಂಡು ಈ ಕಾರ್ಯಕ್ರಮಗಳು ಜರುಗಲಿವೆ. ಜೂ.19ರಂದು ಬೆಳಗ್ಗೆ 10.30ಕ್ಕೆ ಕೊಡಕ್ಕಾಡ್ ನಾರಾಯಣನ್ ಸ್ಮಾರಕ ಗ್ರಂಥಾಲಯದಲ್ಲಿ ಪಕ್ಷಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಕೇರಳ ರಾಜ್ಯ ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ಪಿ.ಅಪ್ಪುಕುಟ್ಟನ್ ಉದ್ಘಾಟಿಸುವರು. ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ವಿ.ಕುಂuಟಿಜeಜಿiಟಿeಜರಾಮನ್ ಅಧ್ಯಕ್ಷತೆ ವಹಿಸಿದ್ದರು. ಅಂದು ವಿಕ್ಟರ್ಸ್ ಚಾನೆಲ್ ನಲ್ಲಿ ಶಿಕ್ಷಣ ಸಚಿವ ಪೆÇ್ರ.ಸಿ.ರವೀಂದ್ರನಾಥ್ ವಾಚನಾ ಸಂದೇಶ ನೀಡುವರು. ಅಂದು ಎಲ್ಲ ಗ್ರಂಥಾಲಯಗಳಲ್ಲೂ ಪಿ.ಎನ್.ಪಣಿಕ್ಕರ್ ಸಂಸ್ಮರಣೆ ನಡೆಯಲಿದೆ. ನಂತರದ ದಿನಗಳಲ್ಲಿ ವಿವಿಧೆಡೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.


