ಕಾಸರಗೋಡು: ಐ.ಎಚ್.ಆರ್.ಡಿ.ಯ ವ್ಯಾಪ್ತಿಯಲ್ಲಿ ಕುಂಬಳೆಯಲ್ಲಿರುವ ಕಾಲೇಜ್ ಆಫ್ ಅಪ್ಲೈಡ್ ಸಯನ್ಸ್ ನಲ್ಲಿ 2020-21 ಶೈಕ್ಷಣಿಕ ವರ್ಷದಲ್ಲಿ ವಿವಿಧ ಹುದ್ದೆಗಳಿಗೆ ತಾತ್ಕಾಲಿಕ ಹುದ್ದೆಗಳಿಗೆ ಕರಾರಿನ ಮೇರೆಗೆ ನೇಮಕಾತಿ ನಡೆಯಲಿದೆ.
ವಿವಿಧ ವಿಷಯಗಳಲ್ಲಿ ಸಹಾಯಕ ಪ್ರಾಚಾರ್ಯ, ಡೆಮೋನ್ಸ್ಟ್ರೇ ಟರ್ ಇನ್ ಇಲೆಕ್ಟ್ರಾನಿಕ್ಸ್ ಲ್ಯಾಬ್, ಕಂಪ್ಯೂಟರ್ ಪೆÇ್ರೀಗ್ರಾಮರ್ ಎಂಬ ವಿಷಯಗಳಲ್ಲಿ ಹುದ್ದೆ ಬರಿದಾಗಿವೆ. ಕಂಪ್ಯೂಟರ್ ಸಯನ್ಸ್ ಸಹಾಯಕ ಪ್ರಾಚಾರ್ಯ, ಇಲೆಕ್ಟ್ರಾ ನಿಕ್ಸ್ ಹುದ್ದೆಗೆ ಶೇ 60 ಅಂಕದೊಂದಿಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಯು.ಜಿ.ಸಿ. ನೆಟ್ ಅರ್ಹತೆಯಾಗಿದೆ. ಸಹಾಯಕ ಪ್ರಾಚಾರ್ಯ ಕನ್ನಡ, ಮಲೆಯಾಳಂ, ಕಾಮರ್ಸ್, ಗಣಿತ, ಇಂಗ್ಲೀಷ್, ಹಿಂದಿ ಹುದ್ದೆಗಳಿಗೆ ಶೇ 55 ಅಂಕದೊಂದಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸನ್ನಾತಕೋತ್ತರ ಪದವಿ, ಯು.ಜಿ.ಸಿ. ನೆಟ್ ಅರ್ಹತೆಯಾಗಿದೆ. ಡೆಮೋನ್ಸ್ಟ್ರೇ ಟರ್ ಇನ್ ಇಲೆಕ್ಟ್ರಾನಿಕ್ಸ್ ಲ್ಯಾಬ್ ಹುದ್ದೆಗೆ ಶೇ 60 ಅಂಕದೊಂದಿಗೆ ಬಿ.ಎಸ್.ಸಿ. ಇಲೆಕ್ಟ್ರಾ ನಿಕ್ಸ್/ ಡಿಪೆÇ್ಲಮಾ ಇನ್ ಇಲೆಕ್ಟ್ರಾ ನಿಕ್ಸ್ ಅರ್ಹತೆಯಾಗಿದೆ. ಕಂಪ್ಯೂಟರ್ ಪೆÇ್ರೀಗ್ರಾಮರ್ ಹುದ್ದೆಗೆ ಶೇ 60 ಅಂಕದೊಂದಿಗೆ ಬಿ.ಎಸ್.ಸಿ. ಕಂಪ್ಯೂಟರ್ ಸಯನ್ಸ್/ಪಿ.ಜಿ.ಡಿ.ಸಿ.ಎ. ಅರ್ಹತೆಯಾಗಿದೆ. ಶಿಕ್ಷಣಾರ್ಹತೆ, ವೃತ್ತಿ ಅನುಭವ, ಜನನ ದಿನಾಂಕ ಖಚಿತ ಪಡಿಸುವ ದಾಖಲೆಪತ್ರಗಳ, ಬಯೋಡಾಟಾ ಸಹಿತ ಜೂ.15ರ ಮುಂಚಿತವಾಗಿ ಎಂಬ ಈಮೇಲ್ ವಿಳಾಸಕ್ಕೆ ಕಳುಹಿಸಬೇಕು. ಮಾಹಿತಿಗೆ ದೂರವಾಣಿ ನಂಬ್ರ: 04998-215615, 8547005058.


