ಕಾಸರಗೋಡು: ಕೊವೀಡ್-19 ನಿಂದಾಗಿ ಉದ್ಯೋಗ ಕಳೆದುಕೊಂಡ ಆಟೋ ರಿಕ್ಷಾ ಕಾರ್ಮಿಕರಿಗೆ ಬಿಎಂಎಸ್ ಕಾಸರಗೋಡು ಜಿಲ್ಲಾ ಆಟೋ ರಿಕ್ಷಾ ಮಜ್ದೂರ್ ಸಂಘ್ ಕಾಂಞಂಗಾಡ್ ನಗರಸಭಾ ಸಮಿತಿಯ ವತಿಯಿಂದ ಆಹಾರ ಕಿಟ್, ಮಾಸ್ಕ್‍ಗಳನ್ನು ವಿತರಿಸಲಾಯಿತು.
ರಾಜ್ಯದ ಎಲ್ಲಾ ಆಟೋ ರಿಕ್ಷಾ ಕಾರ್ಮಿಕರಿಗೆ 5000 ರೂ. ಧನಸಹಾಯವಾಗಿ ನೀಡಬೇಕು, ಎರಡು ತಿಂಗಳು ಉಚಿತ ರೇಶನ್ ನೀಡಬೇಕು, ವಿದ್ಯುತ್ ದರ ಉಚಿತ ಮಾಡಬೇಕು ಮೊದಲಾದ ಬೇಡಿಕೆಗಳನ್ನು ಸಭೆಯಲ್ಲಿ ಆಗ್ರಹಿಸಿತು.
ಜಿಲ್ಲಾ ಅಧ್ಯಕ್ಷ ಎಸ್.ಕೆ.ಉಮೇಶ್ ಉದ್ಘಾಟಿಸಿದರು. ನಗರಸಭಾ ಸಮಿತಿ ಅಧ್ಯಕ್ಷ ಕುಂಞÂರಾಮನ್ ಕಾಟ್ಟುಕುಳಂಗರ ಅಧ್ಯಕ್ಷತೆ ವಹಿಸಿದರು.
ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು, ಭರತನ್, ವಿ.ರಾಧಾಕೃಷ್ಣನ್, ಶಿನೋಜ್, ಬಾಲಕೃಷ್ಣನ್, ಎಚ್.ವಿ.ದಾಮೋದರ, ಗಣೇಶ್ ಚೇಟುಕುಂಡು, ಜಯನ್ ಅರಯಿ ಆಷಿದ್ ಮಾತನಾಡಿದರು.


