ಕಾಸರಗೋಡು: ಮೋದಿ ಸರಕಾರದ ಪ್ರಥಮ ವರ್ಷದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಉದುಮ ಗ್ರಾಮ ಪಂಚಾಯತ್‍ನ ಕೋಟಿಕುಳಂ ಬೀಚ್ ರೋಡ್‍ನ ಮಾದವಿ ಅಮ್ಮ ಅವರ ಸೋರುತ್ತಿದ್ದ ಮನೆಯನ್ನು ದುರಸ್ತಿಗೊಳಿಸಿದರು.
ಸೋರುತ್ತಿದ್ದ ಮನೆಯಲ್ಲಿ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ಮಾದವಿ ಅಮ್ಮ ಅವರ ಮನೆಯನ್ನು ಬಿಜೆಪಿ ಉದುಮ ಪಂಚಾಯತ್ ಸಮಿತಿ ಮತ್ತು ಪರಿವಾರ ಪಾಲಕುನ್ನು ಯುಎಇ ಒಕ್ಕೂಟದ ಸದಸ್ಯರ ಸಹಕಾರದೊಂದಿಗೆ ಬಿಜೆಪಿ ಕಾರ್ಯಕರ್ತರು ದುರಸ್ತಿಗೊಳಿಸಿದರು.
ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವೈ.ಕೃಷ್ಣದಾಸ್ ದುರಸ್ತಿ ಕಾಮಗಾರಿಯನ್ನು ಉದ್ಘಾಟಿಸಿದರು. ಉದುಮ ಪಂಚಾಯತ್ ಬಿಜೆಪಿ ಅಧ್ಯಕ್ಷ ವಿನಾಯಕ ಪ್ರಸಾದ್ ಅಧ್ಯಕ್ಷತೆ ವಹಿಸಿದರು. ಪಳ್ಳಿಕೆರೆ ಪಂಚಾಯತ್ ಉಪಾಧ್ಯಕ್ಷ ಲೋಕೇಶ್ ಬಟ್ಟತ್ತೂರು, ಉದುಮ ಪಂಚಾಯತ್ ಸಮಿತಿ ಸದಸ್ಯ ಶಾಜಿ ಕೋಟಿಕುಳಂ, ಬೂತ್ ಅಧ್ಯಕ್ಷ ಬಿಜು ಮೋಹನ್, ಸಿ.ಬಾಬು, ಉದಯನ್ ಪರಿಯಾರಂ ಮೊದಲಾದವರು ನೇತೃತ್ವ ನೀಡಿದರು.


