ಕಾಸರಗೋಡು: ಕಾಸರಗೋಡು ಜಿಲ್ಲೆಯ ಪ್ರಥಮ ಸ್ಥಳೀಯ ಜೈವಿಕ ವೈವಿಧ್ಯ ಪರಂಪರಾಗತ ಕೇಂದ್ರವಾಗಿ ಕಾನತ್ತೂರಿನ ನೈಯಂ ಕಯಂ ಜಲಾಶಯವನ್ನು (ಹಿನ್ನೀರು) ಜೈವಿಕ ವೈವಿಧ್ಯ ಪರಂಪರಾಗತ ಕೇಂದ್ರವಾಗಿ ಘೋಷಿಸಲಾಗಿದೆ. ಕೇರಳ ರಾಜ್ಯದ ಹತ್ತನೇ ಕೇಂದ್ರ ಇದಾಗಿದೆ.
ಈ ಜಲಾಶಯದ ಸಂರಕ್ಷಣೆಗೆ ಈ ಘೋಷಣೆಯ ಮೂಲಕ ಶಕ್ತಿ ಲಭಿಸಿದೆ. ಜಲಾಶಯಕ್ಕೆ ಯಾವುದೇ ರೀತಿಯ ವಿನಾಶಕಾರಿ ಪರಿಣಾಮ ನೀಡುವ ನಡವಳಿಕೆ ತೋರಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಇದರಿಂದ ಸಾಧ್ಯವಾಗಲಿದೆ.
ರಾಜ್ಯ ಜೈವಿಕ ವೈವಿಧ್ಯ ಮಂಡಳಿ, ಕೇರಳ ಅರಣ್ಯ ಅಧ್ಯಯನ ಇನ್ಸ್ ಸ್ಟಿಟ್ಯೂಟ್ ಗಳ ನೇತೃತ್ವದಲ್ಲಿ ನಡೆಸಿದ ಅಧ್ಯಯನದ ವರದಿಯ ಹಿನ್ನೆಲೆಯಲ್ಲಿ ಮುಳಿಯಾರು ಗ್ರಾಮಪಂಚಾಯತ್ ಜೈವಿಕ ವೈವಿಧ್ಯ ಪೆÇೀಷಣೆ ಸಮಿತಿ(ಬಿ.ಎಂ.ಸಿ.) ನೈಯ್ಯಂ ಕಯಂ ಜಲಾಶಯವನ್ನು ಪರಂಪರಾಗತ ಕೇಂದ್ರ ಎಂದು ಘೊಷಿಸಿ ನಿರ್ಣಯ ಮಂಡಿಸಿದೆ.
ಈ ಜಲಾಶಯ ಮತ್ತು ತೀರ ಪ್ರದೇಶದಲ್ಲಿ ಸುಮಾರು 111 ಸಸ್ಯ ವೈವಿಧ್ಯಗಳಿವೆ. 20ರಷ್ಟು ಚಿಟ್ಟೆ ವಿಭಾಗಗಳಿವೆ, 6 ವಿಧದ ಉರಗಗಳು, 12 ವಿಧದ ಪಕ್ಷಿಗಳು, 3 ವಿಧದ ಸಸ್ತನಿಗಳು, 11 ರಷ್ಟು ವಿಭಾಗದ ದುಂಬಿಗಳು, ಏಡಿ, 22 ವಿಧದ ಮೀನು ಜಾತಿಗಳು, 35 ಕಿಲೋ ತೂಕದ ಆಮೆ ಇತ್ಯಾದಿಗಳು ಇಲ್ಲಿವೆ.
ಕಳೆದ ವರ್ಷ ಕಡು ಬೇಸಗೆಯಲ್ಲಿ ನೈಯಂ ಕಯಂ ಜಲಾಶಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬರಡಾಗಿದ್ದು, ಅಪೂರ್ವ ಜಾತಿಯ ಅನೇಕ ಮೀನುಗಳು ಸತ್ತಿದ್ದುವು. ನಂತರ ರಾಜ್ಯ ಜೈವಿಕ ವೈವಿಧ್ಯ ಮಂಡಳಿಯ ಆದೇಶ ಪ್ರಕಾರ ಪರಿಣತ ತಂಡ ನೈಯಂ ಕಯಂ ಗೆ ಆಗಮಿಸಿ ಅಧ್ಯಯನ ನಡೆಸಿ ಪರಿಹಾರ ಒದಗಿಸಿತ್ತು.
ಕಾಸರಗೋಡು ಜಿಲ್ಲೆಯ ವಿವಿಧ ಅನಾಥಾಲಯಗಳಿಗೆ 98, 67171 ರೂ. ಆರ್ಫನೇಜ್ ಗ್ರ್ಯಾಂಟ್ ಹಸ್ತಾಂತರ
ಸಮಾಜ ನೀತಿ ಇಲಾಖೆಯಿಂದ ಕಾಸರಗೋಡು ಜಿಲ್ಲಾ ಪಂಚಾಯತ್ ಮಂಜೂರು ಮಾಡಿದ 98, 67171 ರೂ. ಆರ್ಫನೇಜ್ ಗ್ರ್ಯಾಂಟ್ ಜಿಲ್ಲೆಯ ವಿವಿಧ ಅನಾಥಾಲಯಗಳಿಗೆ ಹಸ್ತಾಂತರಿಸಲಾಗಿದೆ. ಪುತ್ತಿಗೆ ಮುಹಿಮಾತ್ತುಲ್ ಮುಸ್ಲಿಂ ಎಜ್ಯುಕೇಶನ್ ಸೆಂಟರ್, ಮಂಜೇಶ್ವರ ಆರ್ಫನೇಜ್, ದೇಳಿ ಸ ಅದಿಯ ಆರ್ಫನೇಜ್, ಆಲಂಪಾಡಿ ನೂರುಲ್ ಇಸ್ಲಾಂ ಆರ್ಫನೇಜ್, ಏಚ್ಚಿಕಾನ ವೃಂದಾವನ ಬಾಲಸದನ, ಉಪ್ಪಿಲಾಕಾರಿ ಸಂತ ಜೋನ್ಸ್ ರಿಹಾಬಿಲಿಟೇಷನ್ ಸೆಂಟರ್, ಕರಿವೇಡಗಂ ಸಾನ್ ಜೋಸ್ ಬಾಲಭವನ, ಪಚ್ಚಂಬಳ ಮಲ್ಜವುಲ್ ಆರ್ಫನೇಜ್, ತ್ರಿಕರಿಪುರ ಮುಜುಮದ್ ಗಾರ್ಡನ್, ಕಣ್ಣಿವಯಲ್ ಲೆಸೈಕ್ಸ್ ಭವನ್ ಓಲ್ಡ್ ಏಜ್ ಹೋಂ, ಚಿತ್ತಾರಿಕಲ್ಲ್ ವೈ.ಎಸ್.ನಿವಾಸ್ ಓಲ್ಡ್ ಏಜ್ ಹೋಂ ಸಹಿತ ಅನಾತಾಲಯಗಳಿಗಾಗಿ ಜಿಲ್ಲಾಪಂಚಾಯತ್ ಗೆ ಮಂಜೂರು ಮಾಡಿದ ಪೂರ್ಣ ನಿಧಿಯನ್ನು ಹಸ್ತಾಂತರಿಸಲಾಗಿದೆ.


