ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಅಬಕಾರಿ ದಳ ಅಕ್ರಮ ಮದ್ಯ ವಿರುದ್ಧ ತಪಾಸಣೆ ಚುರುಕುಗೊಳಿಸಿದೆ. ಕಾಸರಗೋಡು ಜಿಲ್ಲೆಯ ವಿವಿಧೆಡೆ ನಡೆಸಿದ ತಪಾಸಣೆಯಲ್ಲಿ ಈ ವರೆಗೆ(ಜೂ.16) ವರೆಗೆ 187 ಅಬಕಾರಿ ಕೇಸುಗಳನ್ನು, 9 ಎನ್.ಡಿ.ಪಿ.ಎಸ್. ಕೇಸುಗಳನ್ನು, 67 ಕೋಟ್ಪಾ ಕೇಸುಗಳನ್ನು ದಾಖಲಿಸಿದೆ. 17 ವಾಹನಗಳನ್ನು ವಶಪಡಿಸಲಾಗಿದೆ. 13200 ರೂ. ದಂಡ ವಸೂಲಿ ಮಾಡಲಾಗಿದೆ. ಜಿಲ್ಲೆಯ ವಿವಿಧೆಡೆಗಳಿಂದ 546.6 ಲೀ. ಕರ್ನಾಟಕ ನಿರ್ಮಿತ ಮದ್ಯ, 46.3 ಕೇರಳ ನಿರ್ಮಿತ ಮದ್ಯ, 9722 ಲೀ. ಹುಳಿರಸ, 158ಲೀ. ಸಾರಾಯಿ, 3.55 ಕಿಲೋ ಗಾಂಜಾ, 21 ಲೀ. ಶೇಂದಿ, 8 ಲೀ. ವೈನ್, 5.5 ಲೀ. ಅರಿಷ್ಠ, 55.2 ಕಿಲೋ ನಿಷೇಧಿತ ಹೊಗೆಸೊಪ್ಪು ಉತ್ಪನ್ನಗಳನ್ನು ಪತ್ತೆ ಮಾಡಿ ವಶಪಡಿಸಲಾಗಿದೆ. ಅತಿ ಮದ್ಯಾಸಕ್ತಿ, ಈ ಮೂಲಕ ಅಸ್ವಸ್ಥತೆ ಹೊಂದಿರುವ 4 ಮಂದಿಯನ್ನು ನೀಲೇಶ್ವರದ ವಿಮುಕ್ತಿ ಡೀ ಅಡಿಕ್ಷನ್ ಕೇಂದ್ರದಲ್ಲಿ ದಾಖಲಿಸಲಾಗಿದೆ.
ವಿಶೇಷ ದಳಗಳ ರಚನೆ:
ಲಾಕ್ ಡೌನ್ ಅವಧಿಯಲ್ಲಿ ಇತರ ರಾಜ್ಯಗಳಿಂದ ಮದ್ಯ, ಮಾದಕಪದಾರ್ಥಗಳ ಅಕ್ರಮ ರವಾನೆ ತಡೆಯುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ನೇತೃತ್ವದಲ್ಲಿ ಪೆÇಲೀಸ್, ಅರಣ್ಯ ಇಲಾಖೆಗಳ ಜಂಟ ಸಹಭಾಗಿತ್ವದಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಗುಪ್ತ ನಿಗಾ, ತಪಾಸಣೆ ನಡೆಸುವ ನಿಟ್ಟಿನಲ್ಲಿ ವಿಶೇಷ ದಳಗಳನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ದಳಗಳ ಚಟುವಟಿಕೆ ಇನ್ನಷ್ಟು ಬಿಗಿಗೊಳ್ಳಲಿದೆ ಎಂದು ಸಹಾಯಕ ಅಬಕಾರಿ ಕಮೀಷನರ್ ಕೆ.ಕೆ.ಅನಿಲ್ ಕುಮಾರ್ ತಿಳಿಸಿದರು.
ದೂರು ಸಲ್ಲಿಸಬಹುದು:
ಅಕ್ರಮ ಮದ್ಯ ರವಾನೆ ನಡೆಸುವ ವ್ಯಕ್ತಿ, ಗುಂಪುಗಳ ಬಗ್ಗೆ ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಈ ದೂರವಾಣಿ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡಬಹುದು. ಕಾಸರಗೋಡು ಸ್ಪೆಷ್ಯಲ್ ಸ್ವಾಡ್- 04994257060, ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿ-04994255332, ಕಾಸರಗೋಡು ಅಬಕಾರಿ ರೇಂಜ್ ಕಚೇರಿ-04994257541, ಬಂದಡ್ಕ ಅಬಕಾರಿ ರೇಂಜ್ ಕಚೇರಿ-04994205364, ಬದಿಯಡ್ಕ ಅಬಕಾರಿ ರೇಂಜ್ ಕಚೇರಿ-04994261950, ಕುಂಬಳೆ ಅಬಕಾರಿ ರೇಂಜ್ ಕಚೇರಿ-04998213837, ಹೊಸದುರ್ಗ ಅಬಕಾರಿ ರೇಂಜ್ ಕಚೇರಿ-04672204125, ನೀಲೇಶ್ವರ ಅಬಕಾರಿ ರೇಂಜ್ ಕಚೇರಿ-0467283174.

