ಪೆರ್ಲ: ಖ್ಯಾತ ಪರಿಸರವಾದಿ,ಲೇಖಕ ದಿ.ಶಂಪಾ ದೈತೋಟ(ಶಂಕರನಾರಾಯಣ ಪಾಣಾಜೆ) ಅವರ ಪತ್ನಿ ಸುಳ್ಯ ತಾಲೂಕು ಉಬರಡ್ಕದ ದಿ.ರಾಮಚಂದ್ರ ಭಟ್ ಅವರ ಹಿರಿಯ ಪುತ್ರಿ ಪಿ.ಎಸ್.ಸಾವಿತ್ರಿ ದೈತೋಟ(81) ಮಂಗಳವಾರ ಬೆಂಗಳೂರಿನಲ್ಲಿರುವ ಪುತ್ರಿಯ ಮನೆಯಲ್ಲಿ ನಿಧನರಾದರು.
ಪಾಣಾಜೆ ದೈತೋಟ ಮೂಲದ ಸಾವಿತ್ರಿ ದೈತೋಟ ದಿ.ಶಂಪಾ ದೈತೋಟ ಅವರ ಸಾಹಿತ್ಯ, ಆಯುರ್ವೇದ, ಕೃಷಿ, ಪರಿಸರ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದರು. ಮೃತರು ಪುತ್ರ, ಮೂವರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.


