HEALTH TIPS

ವಿದ್ಯುತ್ ಕಳವು-ಭಾರೀ ಮೊತ್ತದ ವಂಚನೆ ಪತ್ತೆ


             ಮುಳ್ಳೇರಿಯ: ಆದೂರು ಸಮೀಪದ ಮಂಞಪ್ಪಾರೆ ಎಂಬಲ್ಲಿ ಭಾರೀ ಮೊತ್ತದ ವಿದ್ಯುತ್ ಬಿಲ್ ಕಳವು ಪತ್ತೆಹಚ್ಚಲಾಗಿದೆ.
           ಮಂಞಪ್ಪಾರೆಯ ಸಯ್ಯದ್ ಉಮರ್ ಅವರ ಮನೆಗೆ ಧಾಳಿ ನಡೆಸಿದ ವಿದ್ಯುತ್ ಎವಿಟಿಎಸ್ ತಂಡ ಮಂಗಳವಾರ ನಡೆಸಿದ ಧಾಳಿಯ ವೇಳೆ ಕಳೆದೊಂದು ವರ್ಷದಲ್ಲಿ 8 ಲಕ್ಷ ರೂ.ಗಳ ಬೃಹತ್ ಮೊತ್ತದ ವಿದ್ಯುತ್ ಕಳವು ನಡೆದಿರುವುದು ಪತ್ತೆಹಚ್ಚಲಾಗಿದೆ. ವಿದ್ಯುತ್ ಮೀಟರ್ ಸಂಪರ್ಕವನ್ನು ಕಡಿತಗೊಳಿಸಿ ಭಾರೀ ಬುದ್ದಿಮತ್ತೆಯಿಂದ ಈ ವಿದ್ಯುತ್ ಕಳವು ನಡೆಸಲಾಗಿದೆ ಎಂದು ಅಧಿಕೃತರು ತಿಳಿಸಿದ್ದಾರೆ. ಮನೆಯೊಳಗೆ ಪ್ರತ್ಯೇಕ ವ್ಯವಸ್ಥೆಯ ಮೂಲಕ ಕಳವು ನಡೆಸಿದ ವಿದ್ಯುತ್ ಬೇಕಾದಂತೆ ಬಳಸಲು ಸಿದ್ದಪಡಿಸಿರುವುದು ಕಂಡುಬಂದಿದೆ. ಕೆಎಸ್‍ಇಬಿ (ಕೇರಳ ವಿದ್ಯುತ್ ಪ್ರಸರಣ ಬೋರ್ಡ್)ಗೆ ಲಭಿಸಿದ ರಹಸ್ಯ ಮಾಹಿತಿಯ ಮೇರೆಗೆ ಈ ಧಾಳಿ ನಡೆಸಲಾಗಿದೆ ಎಂದು ಅಧಿಕೃತರು ತಿಳಿಸಿದರು. ಜಿಲ್ಲೆಯಲ್ಲಿ ಕಳೆದೊಂದು ತಿಂಗಳಲ್ಲಿ ಪ್ರಸ್ತುತ ಘಟನೆಯೂ ಸೇರಿ ಐದು ಕಡೆಗಳಲ್ಲಿ ವಿದ್ಯುತ್ ಕಳ್ಳತನ ಪತ್ತೆಹಚ್ಚಲಾಗಿದೆ ಎಂದು ಅಧಿಕೃತರು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries