ಕುಂಬಳೆ: ಡೀಸೆಲ್ ದರ ಏರಿಕೆಯನ್ನು ಪ್ರತಿಭಟಿಸಿ ಎಲ್.ಜೆ.ಡಿ. ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಕುಂಬಳೆಯ ಅಂಚೆ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಯಿತು.
ಎಲ್‍ಜೆಡಿ ಜಿಲ್ಲಾ ಉಪಾಧ್ಯಕ್ಷ ಸಿದ್ದಿಕ್ ಆಲಿ ಮೊಗ್ರಾಲ್ ಧರಣಿ ಉದ್ಘಾಟಿಸಿದರು. ಸಿದ್ದಿಕ್ ರಹಮಾನ್ ಅಧ್ಯಕ್ಷತೆ ವಹಿಸಿದರು. ಡಾ|ದಾಮೋದರ, ರಾಶೀದ್ ಮೊಗ್ರಾಲ್, ಮುಹಮ್ಮದ್ ಮೈಮೂನ್‍ನಗರ್, ಎಂ.ಎ.ಹಂಸ, ದಾಮೋದರ ಆರಿಕ್ಕಾಡಿ, ಬಿ.ಎಲ್.ಮುಹಮ್ಮದಲಿ, ಮುಹಮ್ಮದ್ ಹಾಶೀರ್, ವಾಲಿಯನ್ ಡಿಸೂಸ ಮೊದಲಾದವರು ಮಾತನಾಡಿದರು.
ಅಹಮ್ಮದಲಿ ಕುಂಬಳೆ ಸ್ವಾಗತಿಸಿ, ಇಬ್ರಾಹಿಂ ಕೊಪ್ಪಳಂ ವಂದಿಸಿದರು.


