ಮುಳ್ಳೇರಿಯ: ಕರ್ನಾಟಕ ಗಡಿಪ್ರದೇಶವಾದ ದೇಲಂಪಾಡಿ ಪಂಚಾಯತ್‍ನ ದೇಲಂಪಾಡಿ ಗ್ರಾಮ ಪ್ರದೇಶಕ್ಕೆ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತಾನ್ ಅವರು ಆಗಮಿಸಿ ಗ್ರಾಮದ ಜನತೆಯಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಕೊರೊನಾ ಮಹಾಮಾರಿ ರೋಗ ದೇಶದಾದ್ಯಂತ ಬಾಧಿಸಿದ್ದು, ಕೇಂದ್ರ ಸರಕಾರ-ಕೇರಳ ರಾಜ್ಯ ಸರಕಾರ ಕೈಗೊಂಡ ತೀರ್ಮಾನವನ್ನು ವಿವರಿಸಿದರು.
ಲಾಕ್‍ಡೌನ್ ಆದಾಗ ದೇಲಂಪಾಡಿ ಗ್ರಾಮದ ಜನತೆ ನಾಲ್ಕು ದಿಕ್ಕುಗಳಿಂದಲೂ ದಿಗ್ಬಂಧನಕ್ಕೊಳಗಾಗಿ ತಮ್ಮ ಪ್ರಾಥಮಿಕ ಸವಲತ್ತುಗಳನ್ನು ಪಡೆಯಲು ಕಷ್ಟವಾದ ಸಂದರ್ಭವನ್ನು ಕಾಂಗ್ರೆಸ್ಸಿನ ಹಿರಿಯ ನಾಯಕ ಬೆಳ್ಳಿಪ್ಪಾಡಿ ಸದಾಶಿವ ರೈ ಸಂಸದರಿಗೆ ಮನವಿ ಮೂಲಕ ತಿಳಿಯಪಡಿಸಿದರು.
ಇದೇ ಸಂದರ್ಭ ನಡೆಸಲ್ಪಟ್ಟ ಸಭೆಯಲ್ಲಿ ಸಾರ್ವಜನಿಕರು ತಮ್ಮ ತಮ್ಮ ಅಹವಾಲುಗಳನ್ನು ಲಿಖಿತ ಮನವಿ ಮೂಲಕ ತಿಳಿಸಿದರು. ಕೇಂದ್ರ-ರಾಜ್ಯ ಸರಕಾರಗಳ ವಿಭಿನ್ನ ರಾಜಕೀಯ ದೃಷ್ಟಿಕೋನವೇ ಕೊರೊನಾ ಮಾರಿಯನ್ನು ತಡೆಗಟ್ಟುವ ವೇಳೆ ಕೆಲವೆಡೆ ಸಂಚಾರಕ್ಕೆ ದಿಗ್ಬಂಧನವಾಗಿ ಜನತೆಗೆ ಆದ ಕಷ್ಟವನ್ನು ಸಂಸದರು ಒಪ್ಪಿಕೊಂಡರಲ್ಲದೆ ಗಡಿಪ್ರದೇಶ ತಲಪಾಡಿಯಲ್ಲಾದ ಕತೆಯನ್ನು ವಿವರಿಸಿದರು. ಮುಂದಿನ ದಿನದಲ್ಲಿ ಯೋಗ್ಯ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ನಂದಕುಮಾರ ಅಧ್ಯಕ್ಷತೆ ವಹಿಸಿದ್ದು, ವೇದಿಕೆಯಲ್ಲಿ ಕಾಂಗ್ರೇಸ್ ಮಂಡಲಾಧ್ಯಕ್ಷ ಟಿ.ಕೆ.ದಾಮೋದರನ್, ಕಾಸರಗೋಡು ಡಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಕೆ.ಜೇಮ್ಸ್, ಪಂಚಾಯತ್ ಸದಸ್ಯರಾದ ನಳಿನಾಕ್ಷಿ, ಐತ್ತಪ್ಪ ನಾಯ್ಕ, ಕೊರಗಪ್ಪ ರೈ, ಕಾಂಗ್ರೆಸ್‍ನ ಬಿ.ಬಾಲಕೃಷ್ಣ ಗೌಡ ದೇಲಂಪಾಡಿ, ಡಿ.ಯಂ. ಅಬ್ದುಲ್ಲ ಕುಂಞÂ, ಎ.ಬಿ. ಮಹಮ್ಮದ್ ಬಶೀರ್ ಪಳ್ಳಂಗೋಡು, ಅಬ್ದುಲ್ಲ ಕುಂಞÂ ಚೀನಪ್ಪಾಡಿ, ರಾಮಚಂದ್ರನ್ ಉಪಸ್ಥಿತರಿದ್ದರು. ಸಭೆಯಲ್ಲಿ ಕಲ್ಲಡ್ಕ ರಾಮಯ್ಯ ರೈ, ಮಿತ್ತಂತರ ವಿನಯಪ್ರಸಾದ್, ಯಂ.ಸಿದ್ಧಿಕ್, ಕೆ.ರಸಾಕ್, ವಿನಯ್ ಜೋರ್ಜ್ ದೇಲಂಪಾಡಿ, ಪ್ರಮೋದ್ ಕುಮಾರ್ ಅಡೂರು, ಮಹಾಬಲ ರೈ ಬೊಳ್ಪಾರು, ಖಾದರ್ ಮಯ್ಯಾಳ ಉಪಸ್ಥಿತರಿದ್ದು ಸಹಕರಿಸಿದರು.


