ಮುಳ್ಳೇರಿಯ: ದೇಲಂಪಾಡಿ ಗ್ರಾಮದ ಪಂಜಿಕಲ್ಲು ದೇವರಗುಂಡ ಎಂಬಲ್ಲಿ ದೇಲಂಪಾಡಿ ರಸ್ತೆಗೆ ಮಂಡೆಕೋಲು ಗ್ರಾಮದ ಕಾರ್ಯ ವ್ಯಾಪ್ತಿಯಲ್ಲಿ ರಸ್ತೆಗೆ ಮಣ್ಣು ಹಾಕಿ ಬಂದು ಮಾಡಲಾಗಿತ್ತು. ಈಗ ರಸ್ತೆ ತೆರವಾಗಿದೆ.
ಪಂಜಿಕಲ್ಲು-ದೇವರಗುಂಡ ಎಂಬಲ್ಲಿ ಬಂದ್ ಮಾಡಿದ ರಸ್ತೆಯು 1962ರಲ್ಲಿಯೇ ನಿರ್ಮಾಣ ಗೊಂಡಿದೆಯಲ್ಲದೆ ದೇಲಂಪಾಡಿಯ ಹೈಯರ್ ಸೆಕೆಂಡರಿ ಶಾಲೆ, ಅಯುರ್ವೇದಿಕ್ ಆಸ್ಪತ್ರೆ, ಹೋಮಿಯೋ ಆಸ್ಪತ್ರೆ -ದೇಲಂಪಾಡಿ ಸೇವಾ ಸಹಕಾರಿ ಬ್ಯಾಂಕನ್ನು ಸಂಪರ್ಕಿಸಿ, ಎರಡು ದೇವಸ್ಥಾನಗಳನ್ನು ಸಂಪರ್ಕಿಸಿ 13 ಕಿ.ಮೀ. ಉದ್ದಕ್ಕೆ ಮೆಣಸಿನಕಾನ ತೊರೆಯವರೇಗೆ ಸಾಗುತ್ತದೆ. ಮೇಲಾಗಿ ಪುತ್ತೂರು ತಾಲೂಕಿನ ಈಶ್ವರಮಂಗಲವನ್ನು ಸಂಪರ್ಕಿಸುತ್ತದೆ. ಆದರೆ ಮಣ್ಣು ಹಾಕಿ ಬಂದ್ ಮಾಡಿದ ಸ್ಥಳ ಮಂಡೆಕೋಲು ಗ್ರಾಮಕ್ಕೆ 11.2 ಕಿ.ಮೀ. ವ್ಯಾಪ್ತಿಗೆ ಸೇರಿದೆ. ಪಂಜಿಕಲ್ಲು ಶಾಲೆಯ ಮುಂಭಾಗ ಮಾರ್ಗ-ಭೂಮಿ ಕೇರಳಕ್ಕೆ ಸೇರುತ್ತದೆ.


