ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಸಾಮಾಜಿಕ ಹರಡುವಿಕೆ ತಡೆಯುವ ಆಂಟಿ ಬಾಡಿ ತಪಾಸಣೆ ಇಂದಿನಿಂದ(ಜೂ.9) ಆರಂಭಗೊಳ್ಳಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
ಆರೋಗ್ಯ ಕಾರ್ಯಕರ್ತರು, ಪೆÇಲೀಸರು, ಸಾರ್ವಜನಿಕ ಸಂಪರ್ಕ ಅತ್ಯಧಿಕವಾಗಿ ಹೊಂದಿರುವವರು, ಸರ್ಕಾರಿ ಸಿಬ್ಬಂದಿ, ಇತರ ರಾಜ್ಯಗಳ ಕಾರ್ಮಿಕರು, ಟ್ರಕ್ ಚಾಲಕರ ಸಹಿತ ಇತ್ತೀಚೆಗೆ ಪ್ರಯಾಣ ನಡೆಸಿದವರು, ಮನೆಗಳಲ್ಲಿ, ಸರ್ಕಾರಿ ಕೇಂದ್ರಗಳಲ್ಲಿ ನಿಗಾದಲ್ಲಿರುವವರು, 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು, ಉಸಿರಾಟ ತೊಂದರೆಯಿರುವವರು ಮೊದಲಾದವರನ್ನು ಈ ಮೂಲಕ ತಪಾಸಣೆಗೊಳಪಡಿಸಲಾಗುವುದು. ರೋಗಿಗಳ ಶುಶ್ರೂಷೆ ನಡೆಸುವ ಮತ್ತು ಅಲ್ಲದೆ ಇರುವ ಆರೋಗ್ಯ ಕಾರ್ಯಕರ್ತರನ್ನು ಆಸ್ಪತ್ರೆಗಳಲ್ಲಿ ತಪಾಸಣೆಗೊಳಪಡಿಸಲಾಗುವುದು. ಪೆÇಲೀಸರನ್ನು, ಆಶಾ ಕಾರ್ಯಕರ್ತರನ್ನು, ಅಂಗನವಾಡಿ, ಆರೋಗ್ಯ ಕಾರ್ಯಕರ್ತರನ್ನು, ಪತ್ರಕರ್ತರನ್ನು, ಆಹಾರ ವಿತರಣೆ ನಡೆಸುವವರನ್ನು, ಸ್ವಯಂ ಸೇವಕರನ್ನು, ಟ್ರಕ್ ಚಾಲಕರು, ಸಹಾಯಕರನ್ನು ಸಹಿತ ಸಾರ್ವಜನಿಕ ಸಂಪರ್ಕ ಸಾಧ್ಯತೆ ಹೊಂದಿರುವವರನ್ನು ತಪಾಸಣೆಗೊಳಪಡಿಸಲಾಗುವುದು.
ಜಿಲ್ಲೆಯಲ್ಲಿ ತಾಲೂಕು ಮಟ್ಟದಲ್ಲಿ ಈ ತಪಾಸಣೆ ನಡೆಯಲಿದೆ. ಮಂಜೇಶ್ವರ ತಾಲೂಕಿನಲ್ಲಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆ, ಕಾಸರಗೋಡು ತಾಲೂಕಿನಲ್ಲಿ ಜನರಲ್ ಆಸ್ಪತ್ರೆ, ವೆಳ್ಳರಿಕುಂಡ್ ತಾಲೂಕಿನಲ್ಲಿ ಪನತ್ತಡಿ ತಾಲೂಕು ಆಸ್ಪತ್ರೆ, ಹೊಸದುರ್ಗ ತಾಲೂಕಿನಲ್ಲಿ ಕಾಞಂಗಾಡ್ ಜಿಲ್ಲಾ ಅಸ್ಪತ್ರೆ ಕೇಂದ್ರೀಕರಿಸಿ ತಪಾಸಣೆ ನಡೆಯಲಿದೆ. ಪ್ರತಿ ಸಂಸ್ಥೆಯಲ್ಲೂ ವೈದ್ಯಾಧಿಕಾರಿ, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನೀಶಿಯನ್, ಜ್ಯೂನಿಯರ್ ಹೆಲ್ತ್ ಇನ್ಸ್ ಸ್ಪೆಕ್ಟರ್ ಸಹಿತ ತಂಡ ನೇಮಕಗೊಂಡಿದೆ.


