ನವದೆಹಲಿ: ದೇಶದ ಮೊದಲ ಅನಿಲ ವ್ಯಾಪಾರ ವೇದಿಕೆ ಸೋಮವಾರ (ಜೂನ್ 15) ತನ್ನ ಕಾರ್ಯಾರಂಭ ಮಾಡಿದೆ. ಇದರ ಹೆಸರು ಇಂಡಿಯನ್ ಗ್ಯಾಸ್ ಎಕ್ಸ್ಚೇಂಜ್ (ಐಜಿಎಕ್ಸ್). ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ವರ್ಚ್ಯುವಲಿ ಇದನ್ನು ಉದ್ಘಾಟಿಸಿದ್ದಾರೆ. ಇದನ್ನು ಭಾರತೀಯ ಅನಿಲ ವಿನಿಮಯ ಕೇಂದ್ರ (ಐಇಎಕ್ಸ್) ಪ್ರಾರಂಭಿಸಿದೆ. ಇದು ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಅನಿಲದ ಬೆಲೆಯನ್ನು ನಿರ್ಧರಿಸಲಿದೆ. ಈ ಪ್ರಕ್ರಿಯೆಯು ಪಾರದರ್ಶಕತೆಯಿಂದ ಕೂಡಿರಲಿದೆ.
ಉರ್ಜೆಯ ಅವಶ್ಯಕತೆಯ ಒಂದು ಭಾಗವನ್ನು ಸರ್ಕಾರ ಗ್ಯಾಸ್ ನಿಂದ ಪೂರ್ಣಗೊಳಿಸಲು ಬಯಸುತ್ತಿದೆ. ಸದ್ಯ ಊರ್ಜೆಯಲ್ಲಿ ಅನಿಲದ ಪಾಲುದಾರಿಕೆ ಇದೆ. ಮುಂದಿನ 10 ವರ್ಷಗಳಲ್ಲಿ ಈ ಪಾಲುದಾರಿಕೆಯನ್ನು ಶೇ.15ಕ್ಕೆ ಏರಿಕೆ ಮಾಡುವುದು ಸರ್ಕಾರದ ಗುರಿಯಾಗಿದೆ. ಇಂಡಿಯನ್ ಗ್ಯಾಸ್ ಎಕ್ಸ್ಚೆಂಜ್ ಮೇಲೆ ಹಲವು ಖರೀದಿದಾರರು ಹಾಗೂ ಮಾರಾಟಗಾರರು ಇರಲಿದ್ದು, ಅವರು ಆಕ್ಶನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆರಂಭದಲ್ಲಿ ಗುಜರಾತ್ ನ ಹಾಜಿರಾ, ದಾಹೆಜ್ ಹಾಗೂ ಆಂಧ್ರ ಪ್ರದೇಶದ ಓಡರು/ಕಾಕಿನಾಡಗಳಲ್ಲಿ ಫಿಜಿಕಲ್ ಹಬ್ ಆರಂಭಿಸಲಾಗುತ್ತಿದೆ.ಬಳಿಕ ಇತರೆ ಹಬ್ ಗಳನ್ನು ಇದಕ್ಕೆ ಜೋಡಿಸಲಾಗುತ್ತಿದೆ.
ಗ್ಯಾಸ್ ಎಕ್ಸ್ಚೇಂಜ್ ಮೇಲೆ ನಿತ್ಯ, ದಿನದಿತ್ಯ, ವೀಕ್ಲಿ, ವೀಕ್ ಡೇಜ್, ಪ್ರಾಕ್ಷಿಕ, ಮಾಸಿಕ.. ಹೀಗೆ ಆರು ಮಾರ್ಕೆಟಿಂಗ್ ಪ್ರಾಡಕ್ಟ್ಸ್ ಗಳು ಇರಲಿವೆ. IGX ವ್ಯವಹಾರದ ಔಪಚಾರಿಕಗ್ತೆಯ ಆರಂಭಕ್ಕೂ ಮೊದಲೇ ಮೂರು ಮಾಕ್ ಸೆಶನ್ ಗಳನ್ನು ಆಯೋಜಿಸಿತ್ತು. ಮಾರ್ಚ್ 20, ಏಪ್ರಿಲ್ 9 ಹಾಗೂ ಜೂನ್ 15 ರಂದು ಅವುಗಳನ್ನು ಆಯೋಜಿಸಲಾಗಿತ್ತು. ಸಂಸ್ಥೆ ಇದೆ ವರ್ಷ ಫೆಬ್ರುವರಿಯಲ್ಲಿ ಸದಸ್ಯತ್ವ ಅಭಿಯಾನ ಕೂಡ ಆರಂಭಿಸಿತ್ತು. ಇದುವರೆಗೆ ಅದು 12 ಸದಸ್ಯರು ಹಾಗೂ 300 ಕ್ಲೈಂಟ್ ಗಳನ್ನೂ ಹೊಂದಿದೆ .


