ಕಾಸರಗೋಡುಃ ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಇಬ್ಬರಿಗೆ ಕೋವಿಡ್ ಪಾಸಿಟಿವ್ ಆಗಿದೆ. 8 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕುವೈತ್ ನಿಂದ ಆಗಮಿಸಿದ್ದ 34 ವರ್ಷದ ಕಾಂಞಂಗಾಡ್ ನಗರಸಭೆ ನಿವಾಸಿ, ಖತಾರ್ ನಿಂದ ಆಗಮಿಸಿದ್ದ 24 ವರ್ಷದ ಪಡನ್ನ ಗ್ರಾಮ ಪಂಚಾಯತಿ ನಿವಾಸಿ ರೋಗ ಖಚಿತಗೊಂಡವರು. ಇವರಿಬ್ಬರೂ ಪರಿಯಾರಂ ವೈದ್ಯಟಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾರೆ.
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 8 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಕುಂಬಳೆ ಗ್ರಾಮ ಪಂಚಾಯತಿ ನಿವಾಸಿಗಳಾದ 30, 36,38, 62 ವರ್ಷದ ವ್ಯಕ್ತಿಗಳು, ಮುಳಿಯಾರು ಗ್ರಾಮ ಪಂಚಾಯತಿ ನಿವಾಸಿ 42 ವರ್ಷದ ವ್ಯಕ್ತಿ, 56 ವರ್ಷದ ಕಾಸರಗೋಡು ನಗರಸಭೆ ವ್ಯಾಪ್ತಿಯ ವ್ಯಕ್ತಿ, ಪುಲ್ಲೂರು-ಪೆರಿಯ ಪಂಚಾಯತಿ ನಿವಾಸಿ 25 ವರ್ಷದ ವ್ಯಕ್ತಿ ಗುಣಮುಖರಾದವರು. ಪುಲ್ಲೂರು-ಪೆರಿಯ ನಿವಾಸಿ ಚೆನ್ನೈಯಿಂದ ಆಗಮಿಸಿದ್ದರು. ಉಳಿದವರು ಮಹಾರಾಷ್ಟ್ರದಿಂದ ಬಂದವರು.
ಜಿಲ್ಲೆಯಲ್ಲಿ 3528 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3198 ಮಂದಿ, 330 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ. ನೂತನವಾಗಿ 210 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 383 ಮಂದಿಯ ಫಲಿತಾಂಶ ಲಭಿಸಿಲ್ಲ. 711 ಮಂದಿ ತಮ್ಮ ನಿಗಾ ಅವ„
ಪೂರ್ಣಗೊಳಿಸಿದ್ದಾರೆ.
ಕೇರಳದಲ್ಲಿ 79 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಮಂಗಳವಾರ 79 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 60 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಸ್ತುತ 1366 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 1234 ಮಂದಿ ರೋಗಮುಕ್ತರಾಗಿದ್ದಾರೆ.
ಮಲಪ್ಪುರ-15, ಎರ್ನಾಕುಳಂ-13, ಆಲಪ್ಪುಳ-7, ತೃಶ್ಶೂರು-7, ಕಣ್ಣೂರು-7, ಪತ್ತನಂತಿಟ್ಟ-6, ಪಾಲ್ಘಾಟ್-6, ತಿರುವನಂತಪುರ-4, ಕೊಲ್ಲಂ-4, ಕೋಟ್ಟಯಂ-4, ಕಲ್ಲಿಕೋಟೆ-4, ಕಾಸರಗೋಡು-2 ಎಂಬಂತೆ ರೋಗ ಬಾಧಿಸಿದೆ. ರೋಗ ಬಾ„ತರಲ್ಲಿ 47 ಮಂದಿ ವಿದೇಶದಿಂದ ಬಂದವರು. 26 ಮಂದಿ ಇತರ ರಾಜ್ಯಗಳಿಂದ ಬಂದವರು. ಐದು ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ಬಾಧಿಸಿದೆ.
60 ಮಂದಿ ಗುಣಮುಖ : ತಿರುವನಂತಪುರ-14(ಒಬ್ಬರು ಕೊಲ್ಲಂ ನಿವಾಸಿ), ಪಾಲ್ಘಾಟ್-9, ಕಾಸರಗೋಡು-8, ಮಲಪ್ಪುರಂ-7(ಒಬ್ಬರು ತಿರುವನಂತಪುರ ನಿವಾಸಿ), ಆಲಪ್ಪುಳ-5, ವಯನಾಡು-5, ಕೋಟ್ಟಯಂ-4(ಒಬ್ಬರು ಪತ್ತನಂತಿಟ್ಟ ಜಿಲ್ಲೆಯವರು), ಪತ್ತನಂತಿಟ್ಟ-3, ತೃಶ್ಶೂರು-3, ಎರ್ನಾಕುಳಂ-1, ಕಣ್ಣೂರು-1 ಎಂಬಂತೆ ಗುಣಮುಖರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ 122143 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 120157 ಮಂದಿ ಮನೆಗಳಲ್ಲೂ, ಇನ್‍ಸ್ಟಿಟ್ಯೂಷನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 1986 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಮಂಗಳವಾರ 210 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವರೆಗೆ 118893 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. 4081 ಸ್ಯಾಂಪಲ್‍ಗಳ ವರದಿ ಬರಲು ಬಾಕಿಯಿದೆ. ರಾಜ್ಯದಲ್ಲಿ ಒಟ್ಟು 110 ಹಾಟ್‍ಸ್ಪಾಟ್‍ಗಳಿವೆ.
ಮಾಸ್ಕ್ ಧರಿಸದ 218 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 218 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಆರೋಪದಲ್ಲಿ ಜಿಲ್ಲೆಯಲ್ಲಿ ಒಟ್ಟು 6673 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದ್ದು, ಒಟ್ಟು 33.36 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.


