ಕುಂಬಳೆ: ಸೀತಾಂಗೋಳಿಯಲ್ಲಿ ನಿರ್ಮಿಸಲಾದ ಮಂಜೇಶ್ವರ ಅಡೀಷನಲ್ ಶಿಶು ಅಭಿವೃದ್ಧಿ ಯೋಜನೆ ಕಚೇರಿಯ ನೂತನ ಕಟ್ಟಡ ಮಂಗಳವಾರ ಉದ್ಘಾಟನೆಗೊಂಡಿದೆ. ಮಂಜೇಶ್ವರ ಬ್ಲಾಕ್ ಪಂಚಾಯತಿ ವತಿಯಿಂದ ಎರಡು ಅಂತಸ್ತಿನ ಈ ಕಟ್ಟಡ ನಿರ್ಮಿಸಲಾಗಿದೆ.
ಬ್ಲಾಕ್ ಪಂಚಾಯತಿ ವ್ಯಾಪ್ತಿಯ ಎಣ್ಮಕಜೆ, ಮಂಗಲ್ಪಾಡಿ, ಪುತ್ತಿಗೆ ಗ್ರಾಮಪಂಚಾಯತಿ ಗಳಲ್ಲಿರುವ 103 ಅಂಗನವಾಡಿಗಳ ಚಟುವಟಿಕೆಗಳು ಈ ನೂತನ ಕಟ್ಟಡದಲ್ಲಿ ಏಕೀಕರಣಗೊಳ್ಳಲಿದೆ. ಈ ವರೆಗೆ(2012ರಿಂದ) ಸೀತಾಂಗೋಳಿಯ ಬಾಡಿಗೆ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಈ ಕಚೇರಿ ಚಟುವಟಿಕೆ ನಡೆಸುತ್ತಿತ್ತು. ನೂತನ ಕಚೇರಿಯ ನಿರ್ಮಾಣ ಮೂಲಕ ವಿಶೇಷ ಚೇತನರ, ವಯೋವೃದ್ಧರ ಸಹಿತ ಫಲಾನುಭವಿ ಜನತೆಗೆ ಈ ಮೂಲಕ ಸಮಸ್ಯೆ ಪರಿಹಾರವಾಗಿದೆ. ಸಭಾಂಗಣ, ಕಚೇರಿ ಕ್ಯಾಬಿನ್ ಗಳು, ಶೌಚಾಲಯ ಸಹಿತ ಸೌಲಭ್ಯಗಳು ಈ ಕಟ್ಟಡದಲ್ಲಿವೆ. 2019ರಲ್ಲಿ ಈ ಕಟ್ಟಡದ ನಿರ್ಮಾಣ ಆರಂಭಗೊಂಡಿತ್ತು. ಅಂಗನವಾಡಿ ಮೂಲಕ ಫೆÇಷಕಾಹಾರ ವಿತರಣೆ, ಮಕ್ಕಳ ಬೆಳವಣಿಗೆಯ ನಿಗಾ, ಅನೌಪಚಾರಿಕ ಪ್ರೀಸ್ಕೂಲ್ ಶಿಕ್ಷಣ, ಯುವತಿಯರಿಗೆ ಪೆÇೀಷಕಾಹಾರ ವಿತರಣೆ, ಕೌನ್ಸಿಲಿಂಗ್, ಜನಜಾಗೃತಿ ತರಗತಿಗಳು, ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಪೆÇೀಷಕಾಹಾರ ವಿತರಣೆ ಇತ್ಯಾದಿ ಚಟುವಟಿಕೆಗಳ ಯೋಜನೆಗಳು ನಡೆದುಬರುತ್ತಿವೆ.
ಶಾಸಕ ಎಂ.ಸಿ.ಕಮರುದ್ದೀನ್ ನೂತನ ಕಟ್ಟಡ ಉದ್ಘಾಟಿಸಿದರು. ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಮತಾ ದಿವಾಕರ್, ಪುತ್ತಿಗೆ ಗ್ರಾಮಪಂಚಾಯತಿ ಅಧ್ಯಕ್ಷೆ ಕೆ.ಅರುಣಾ, ಮಂಗಲ್ಪಾಡಿ ಗ್ರಾಮಪಂಚಾಯತಿ ಅಧ್ಯಕ್ಷ ಷಾಹುಲ್ ಹಮೀದ್, ಜಿಲ್ಲಾ ಮಹಿಳಾ ಶಿಶು ಅಭಿವೃಧ್ಧಿ ಅಧಿಕಾರಿ ಡೀನಾ ಭರತನ್, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್, ಬಿ.ಡಿ.ಒ. ಎನ್.ಸುರೇಂದ್ರ್, ಬ್ಲಾಕ್ ಪಂಚಾಯತಿ ಸದಸ್ಯ ಎಂ.ಪ್ರದೀಪ್ ಕುಮಾರ್, ಪುತ್ತಿಗೆ ಗ್ರಾಮಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಚನಿಯ, ಸದಸ್ಯರಾದ ಇ.ಕೆ.ಮುಹಮ್ಮದ್ ಕುಂಞÂ, ಅಬ್ದುಲ್ಲ ಮುಗು, ಎಣ್ಮಕಜೆ ಗ್ರಾಮಪಂಚಾಯತಿ ಸದಸ್ಯೆ ಚಂದ್ರಾವತಿ, ಶಿಶು ಅಭಿವೃದ್ಧಿ ಅಧಿಕಾರಿ ಟಿ.ಆರ್.ಲತಾ ಕುಮಾರಿ, ಕಚೇರಿ ಸಿಬ್ಬಂದಿ, ಅಂಗನವಾಡಿ ನೌಕರರು, ಶಾಲಾ ಕೌನ್ಸಿಲರ್ ಗಳು ಮೊದಲಾದವರು ಉಪಸ್ಥಿತರಿದ್ದರು. ತೇನಾಮೃತ್ ನ್ಯೂಟ್ರೀಬಾರ್ ವಿತರಣೆಯ ಯೋಜನೆ ಮಟ್ಟದ ಉದ್ಘಾಟನೆ ಮತ್ತು ಅಂಗನವಾಡಿ ಆನ್ ಲೈನ್ ತರಗತಿ ಉದ್ಘಾಟನೆ ಈ ವೇಳೆ ಜರುಗಿತು.


