ತಿರುವನಂತಪುರ: ಕೊರೊನಾ ನಿರ್ಬಂಧಗಳ ಮಧ್ಯೆ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹಾಟ್‍ಸ್ಪಾಟ್ ಹೊರತುಪಡಿಸಿ ಇತರೆಡೆಗಳ ಎಲ್ಲಾ ಉದ್ಯೋಗಿಗಳು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸಕ್ಕೆ ತೆರಳಬೇಕು. ಕಂಟೈನ್‍ಮೆಂಟ್ ವಲಯಗಳಲ್ಲಿ ಆಯಾ ಜಿಲ್ಲೆಗಳ ನೌಕರರು ಮಾತ್ರ ಆಗಮಿಸಬೇಕು ಎಂದು ಸರ್ಕಾರ ಆದೇಶ ನೀಡಿದೆ. ಈಗಾಗಲೇ ಘೋಶಿಸಿರುವ ಶನಿವಾರದ ರಜೆ ಯಥಾರೀತಿ ಮುಂದುವರಿಯಲಿದೆ.
ರಾಜ್ಯದ ಹಾಟ್‍ಸ್ಪಾಟ್ ಮತ್ತು ಕಂಟೈನ್‍ಮೆಂಟ್ ವಲಯಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ಕಚೇರಿಗಳು, ಸಾರ್ವಜನಿಕ, ಅರೆ ಸರ್ಕಾರಿ ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳನ್ನು ಸೋಮವಾರದಿಂದ ತೆರೆಯುವಂತೆ ಸರ್ಕಾರ ಆದೇಶಿಸಿದೆ. ಉದ್ಯೋಗಿಗಳಲ್ಲಿ ಕುಟುಂಬದ ಸದಸ್ಯರಿಗೆ ಕೋವಿಡ್ ಸೋಂಕು ತಗುಲಿದರೆ ಅವರಿಗೆ 14 ದಿನಗಳ ರಜೆ ನೀಡಲಾಗುತ್ತದೆ. ಕೋವಿಡ್ ಹೆಚ್ಚು ಪ್ರಕರಣಗಳು ಕಂಡುಬಂದಲ್ಲಿ ಸರ್ಕಾರಿ ನೌಕರರಿಗೆ ರಜೆ ನೀಡಲಾಗುವುದು.
ಸರ್ಕಾರದ ನಿಯಮಾನುಸಾರ ಎಲ್ಲಾ ಉದ್ಯೋಗಿಗಳು ಹಾಜರಿರಬೇಕು. ಇತರ ಜಿಲ್ಲೆಗಳಲ್ಲಿ ಕ್ವಾರಂಟೈನ್ ಗೊಳಗಾಗಿದ್ದ ಉದ್ಯೋಗಿಗಳು ದೃಢೀಕರಣ ಪ್ರಮಾಣಪತ್ರ ಪಡೆದು ಕೆಲಸಕ್ಕೆ ತೆರಳಬೇಕು ಎಂದು ಸೂಚಿಸಲಾಗಿದೆ.


