HEALTH TIPS

ಕೋವಿಡ್ ಸಾವಿನ ಸಂಖ್ಯೆ 150 ರ ವರೆಗೂ ವರ್ಧಿಸಬಹುದು-ರಾಜ್ಯ ಆರೋಗ್ಯ ಇಲಾಖೆ ನೀಡಿತು ಸುಳಿವು


             ತಿರುವನಂತಪುರ: ರಾಜ್ಯದಲ್ಲಿ ಮುಂಬರುವ ತಿಂಗಳುಗಳಲ್ಲಿ ಕೋವಿಡ್ ರೋಗ ಬಾಧಿತರು ಮತ್ತು ಮರಣ ಸಂಖ್ಯೆ ವೃದ್ದಿಸುವ ಸಾಧ್ಯತೆ ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮುನ್ಸೂಚನೆ ನೀಡಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯು 100 ದಿನಗಳಲ್ಲಿ ಕೇರಳದಲ್ಲಿ ಕೋವಿಡ್ -19 ಹರಡುವ ಸಾಧ್ಯತೆಯನ್ನು ಮೌಲ್ಯಮಾಪನ ಮಾಡಿದೆ ಎಂದು ವರದಿಗಳು ತಿಳಿಸಿವೆ. ಮುಖ್ಯಮಂತ್ರಿ ಕೂಡ ರಾಜ್ಯದ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ ಎಂಬ ಸುಳಿವನ್ನು ನೀಡಿದ್ದರು.
                          ಸಾವಿನ ಸಂಖ್ಯೆ 150 ಮೀರಬಹುದು:
        ಮುಂದಿನ ಮೂರು ತಿಂಗಳಲ್ಲಿ ಸೋಂಕಿತರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ದಿನಕ್ಕೆ 169 ರೋಗಿಗಳು ಜೂನ್ 31 ರವರೆಗೆ ದಾಖಲಾಗಬಹುದು ಎಂದು ಸರ್ಕಾರ ಅಂದಾಜಿಸಿದೆ. ಉನ್ನತ ಮಟ್ಟದ ಸಭೆಯಲ್ಲಿ ಜುಲೈ 31 ರ ವರೆಗೆ ದಿನಕ್ಕೆ 272 ರೋಗಿಗಳು ಮತ್ತು ಆಗಸ್ಟ್ 31 ರವರೆಗೆ ದಿನಕ್ಕೆ 342 ರೋಗಿಗಳ ಹೆಚ್ಚಳವಾಗಲಿದೆ ಎಂದು ಅಂದಾಜಿಸಿದೆ. ಪ್ರಸ್ತುತ ರಾಜ್ಯದಲ್ಲಿ ಕೋವಿಡ್‍ನಿಂದ ಕೇವಲ 15 ಸಾವುಗಳು ಸಂಭವಿಸಿವೆ. ಆದರೆ ಆಗಸ್ಟ್ ವೇಳೆಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 150 ದಾಟಲಿದೆ ಎಂದು ಸಭೆ ತಿಳಿಸಿದೆ.
                           ಹೆಚ್ಚಿನ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗುತ್ತಾರೆ:
         ಕೇರಳದಲ್ಲಿ ಕೋವಿಡ್ ಏರಿಕೆಗೆ ಕಾರಣವಾದ ಸಂಪರ್ಕ ಮೂಲದಿಂದ ರೋಗ ತಗಲುವುದನ್ನು ನಿಯಂತ್ರಿಸುವಲ್ಲಿ ಸರ್ಕಾರ ಹೆಚ್ಚು ಗಮನ ನೀಡಲಿದೆ. ವಿಶ್ವದಾತ್ಯಂತ, ಒಬ್ಬ ಕೋವಿಡ್ -19 ರೋಗಿಯಿಂದ ಸರಾಸರಿ ಮೂರು ಜನರಿಗೆ ವೈರಸ್ ಸೋಂಕು ತಗಲುತ್ತದೆ. ಆದರೆ ರಾಜ್ಯದಲ್ಲಿ  ಇದನ್ನು 1.45 ಕ್ಕೆ ತಂದುನಿಲ್ಲಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ. ಜೂನ್ ತಿಂಗಳಲ್ಲಿ 100 ಜನರಿಗೆ  ಸಂಪರ್ಕದಿಂದ ಸೋಂಕು ಬಾಧಿಸುವುದಾದರೆ ಜುಲೈನಲ್ಲಿ ಇದು 610 ಕ್ಕೆ ಮತ್ತು ಆಗಸ್ಟ್ ವೇಳೆಗೆ 2909 ಕ್ಕೆ ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ. ಹೆಚ್ಚಿನ ರೋಗಿಗಳು ವಿದೇಶದಿಂದ ಹಾಗೂ ಅನ್ಯರಾಜ್ಯಗಳಿಂದ ಆಗಮಿಸಿದವರೊಂದಿಗಿನ ಸಂಪರ್ಕದಿಂದ ಹರಡಲ್ಪಟ್ಟಿರುವುದಾಗಿದೆ.
                                ಪಾಸ್ ಇಲ್ಲದೆ ಬಂದವರಿಂದ ಬಿಗಡಾಯಿಸಿದ ಸ್ಥಿತಿ:
          ಪ್ರಸ್ತುತ, ರಾಜ್ಯಕ್ಕೆ ಪ್ರವೇಶವನ್ನು ಪಾಸ್ ಮೂಲಕ ನಿಬರ್ಂಧಿಸಲಾಗಿದೆ, ಆದರೆ ಹೊರಹೋಗುವ ಪ್ರಯಾಣಿಕರಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಜೊತೆಗೆ ಪಾಸ್ ಇಲ್ಲದೆ 10,000 ಜನರು ರಾಜ್ಯಕ್ಕೆ ಬಂದಿದ್ದಾರೆ ಎಂದು ಅಂದಾಜಿಸಲಾಗಿದೆ. ವಿದೇಶದಲ್ಲಿ ರೋಗಲಕ್ಷಣಗಳಿಲ್ಲದವರಿಗೂ ಕ್ವಾರಂಟೈನ್ ಬಿಗುಗೊಳಿಸಬೇಕು  ಎಂಬುದು ರಾಜ್ಯ ಸರ್ಕಾರದ ಹೊಸ ನಿಲುವು. ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಪ್ರಸ್ತುತ ತಮ್ಮ ಮನೆಗಳಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. ಅವರ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರಕ್ಕೆ ಸವಾಲಾಗಿದೆ.
                     ಕ್ವಾರಂಟೈನ್ ಉಲ್ಲಂಘನೆ ನಿಯಂತ್ರಿಸುವ ನಿರ್ಧಾರ:
          ರಾಜ್ಯಕ್ಕೆ ಹೊರರಾಜ್ಯದಿಂದ ಬರುವವರಿಗೆ ಹೆಚ್ಚುವರಿಯಾಗಿ ರಿವರ್ಸ್ ಕ್ವಾರಂಟೈನ್ ಬಲಪಡಿಸುವ ಗುರಿ ಸರ್ಕಾರ ಹೊಂದಿದೆ. ವಯೋವೃದ್ದರು ಮತ್ತು ಇತರ ಕಾಯಿಲೆಗಳಿಂದ ಬಳಲುವವರಲ್ಲಿ ಕೋವಿಡ್ -19 ರೋಗ ಬಾಧೇ ಹೆಚ್ಚು ಬಾಧಿಸುವ ಸಾಧ್ಯತೆ ಹೆಚ್ಚಿದೆ. ಕ್ವಾರಂಟೈನ್ ನಿಬಂಧನೆಗಳನ್ನು ಮೀರಿದರೆ ತೀವ್ರ ಕಳವಳಕಾರಿ ಸನ್ನಿವೇಶ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries