ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 328 ಮಂದಿಗೆ ಕೋವಿಡ್ ಸೋಂಕು ಪಾಸಿಟಿವ್ ಆಗಿದೆ. ಇವರಲ್ಲಿ 220 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಜ.3ಒರಿಂದ ಮೇ 3 ವರೆಗಿನ ಎರಡು ಹಂತಗಳಲ್ಲಿ ಜಿಲ್ಲೆಯಲ್ಲಿ 178 ಮಂದಿಗೆ ಕೋವಿಡ್ 19 ಖಚಿತವಾಗಿತ್ತು. ಫೆಬ್ರವರಿಯಲ್ಲಿ ವಿದೇಶದಿಂದ ಆಗಮಿಸಿದ್ದ ವ್ಯಕ್ತಿಗೆ, ಮಾರ್ಚ್ ತಿಂಗಳಲ್ಲಿ ಆಗಮಿಸಿದ್ದ 77 ಮಂದಿಗೆ, ಸಂಪರ್ಕ ಮೂಲಕ 31 ಮಂದಿಗೆ ಸೋಂಕು ಖಚಿತಗೊಂಡಿತ್ತು. ಏ.1ರಿಂದ ವಿದೇಶಗಳಿಂದ ಆಗಮಿಸಿದ್ದ 30 ಮಂದಿಗೆ, ಸಂಪರ್ಕ ಮೂಲಕ 39 ಮಂದಿಗೆ ರೋಗಬಾಧೆಯುಂಟಾಗಿದೆ. ಈ 178 ಮಂದಿ ರೋಗಿಗಳು ಮೇ 10ರಂದು ಗುಣಮುಖರಾಗಿದ್ದು, ಕಾಸರಗೋಡು ಜಿಲ್ಲೆ ಕೋವಿಡ್ ಮುಕ್ತವಾಗಿ ಘೋಷಣೆಗೊಂಡಿತ್ತು.
ಮೇ 4ರ ನಂತರ ಮೂರನೇ ಹಂತದಲ್ಲಿ ಜಿಲ್ಲೆಯಲ್ಲಿ ಭಾನುವಾರ(ಜೂ.7) ವರೆಗೆ 150 ಮಂದಿಗೆ ಕೋವಿಡ್ 19 ಪಾಸಿಟಿವ್ ಆಗಿದೆ. ಇವರಲ್ಲಿ ವಿದೇಶಗಳಿಂದ ಆಗಮಿಸಿದ, ಇತರ ರಾಜ್ಯಗಳಿಂದ ಬಂದ 139 ಮಂದಿಗೆ, ಸಂಪರ್ಕ ಮೂಲಕ 11 ಮಂದಿಗೆ ರೋಗಬಾಧೆಯುಂಟಾಗಿದೆ. ಜಿಲ್ಲೆಯಲ್ಲಿ ಈ ವರೆಗೆ (ಜ.1ರಿಂದ ಜೂ.7 ವರೆಗೆ) ಒಟ್ಟು 328 ಮಂದಿಗೆ ಸೋಂಕು ಖಚಿತಗೊಂಡಿದೆ. ಇವರಲ್ಲಿ 220 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಮೂರನೇ ಹಂತದಲ್ಲಿ ಸೋಂಕು ಸಾಬೀತಾದ 42 ಮಂದಿ ಗುಣಮುಖರಾಗಿದ್ದಾರೆ. 108 ಮಂದಿ ಈಗ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತರ ರಾಜ್ಯಗಳಿಂದ ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಭಾನುವಾರ 205 ಮಂದಿ ಕೇರಳ ಪ್ರವೇಶ:
ಇತರ ರಾಜ್ಯಗಳಿಂದ ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಭಾನುವಾರ 205 ಮಂದಿ ಕೇರಳ ಪ್ರವೇಶ ನಡೆಸಿದ್ದಾರೆ. ಈ ವರೆಗೆ ಒಟ್ಟು 26906 ಮಂದಿ ಈ ಚೆಕ್ ಪೆÇೀಸ್ಟ್ ಮೂಲಕ ಕೇರಳಕ್ಕೆ ಬಂದಿದ್ದಾರೆ.ಒಟ್ಟು 47490 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. ಕಾಸರಗೋಡು ಜಿಲ್ಲೆಯವರಾದ ಒಟ್ಟು 6714 ಮಂದಿ ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಊರಿಗೆ ಆಗಮಿಸಿದ್ದಾರೆ. ಈ ವರೆಗೆ ಒಟ್ಟು 12948 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ.


