ಕಾಸರಗೋಡು: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಜಾನುವಾರುಗಳಿಗೆ ಗೊರಸು ರೋಗ ಪ್ರತಿರೋಧÀಕ ಚುಚ್ಚುಮದ್ದು ನೀಡಲು ಪಶು ಸಂಗೋಪನಾ ಇಲಾಖೆ ತೀರ್ಮಾನಿಸಿದೆ.
ಕೋವಿಡ್ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ರೋಗ ಪ್ರತಿರೋಧ ಚುಚ್ಚುಮದ್ದು ನೀಡುವಿಕೆಯನ್ನು ಈ ಹಿಂದೆ ತಾತ್ಕಾಲಿಕವಾಗಿ ನಿಲುಗಡೆಗೊಳಿಸಲಾಗಿತ್ತು. ಇದರಂತೆ ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿಗಳು ಜಾನುವಾರು ಕೃಷಿಕರ ಮನೆಗಳಿಗೆ ತೆರಳಿ ಅಲ್ಲಿನ ಜಾನುವಾರುಗಳಿಗೆ ಗೊರಸು ರೋಗ ಪ್ರತಿರೋಧಕ ಚುಚ್ಚುಮದ್ದು ನೀಡುವರು.
ಇದೇ ವೇಳೆ ಕೋವಿಡ್ ಕಂಟೈನ್‍ಮೆಂಟ್ ವಲಯ ಮತ್ತು ಹಾಟ್‍ಸ್ಪಾಟ್ ಪ್ರದೇಶಗಳಿಗೆ ಒಳಪಟ್ಟ ಹೈನುಗಾರಿಕಾ ಕೃಷಿಕರ ಜಾನುವಾರುಗಳಿಗೆ ಸದ್ಯ ಚುಚ್ಚುಮದ್ದು ನೀಡದಿರುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಇಂತಹ ಪ್ರದೇಶಗಳು ಕೋವಿಡ್ ರೋಗ ಮುಕ್ತರಾಗಿ ಫÉÇೀಷಿಸಿದ ಬಳಿಕವಷ್ಟೇ ಅಂತಹ ಪ್ರದೇಶಗಳ ಜಾನುವಾರುಗಳಿಗೆ ರೋಗ ಪ್ರತಿರೋಧಕ ಚುಚ್ಚುಮದ್ದು ನೀಡಲು ತೀರ್ಮಾನಿಸಿದೆ.


