ಕೊಲ್ಲಂ: ವಿಕ್ಷಿಪ್ತ ಕೊಲೆ ಪ್ರಕರಣವೆಂದು ಗುರುತಿಸಲ್ಪಟ್ಟ ಉತ್ತರಾ ಕೊಲೆಯ ತನಿಖೆಯಿಂದ ಅಂಚಲ್ ಠಾಣಾ ಸಿಐ ಅವರ ತನಿಖೆ ಅಸ್ಪಷ್ಟವಾಗಿ ಕರ್ತವ್ಯಲೋಪಕ್ಕೆ ಸಮವೆಂದು ಪರಿಗಣಿಸಿ ಸಿಐ ಸಿ.ಎನ್ ಸುಧೀರನ್ ಅವರನ್ನು ವರ್ಗಾಯಿಸಲಾಗಿದೆ.
ಜಿಲ್ಲಾ ಪೆÇಲೀಸ್ ಮುಖ್ಯಸ್ಥರ ವರದಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಿಐ. ಅವರಿಗೆ ಉತ್ತರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈವರೆಗಿನ ತನಿಖೆ ಮತ್ತು ಕರ್ತವ್ಯಲೋಪಕ್ಕೆ ಸಂಬಂದಿಸಿ ಸಮಜಾಯಿಶಿ ನೀಡುವಂತೆ ಜಿಲ್ಲಾ ಪೋಲೀಸ್ ವರಿಷ್ಠರು ಸುಧೀರನ್ ಅವರಿಗೆ ಆದೇಶ ನೀಡಿದ್ದಾರೆ. ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ಶವ ಮಹಜರಿನಂತಹ ತುರ್ತು ತನಿಖೆಗಳನ್ನು ತನ್ನ ಮನೆಗೆ ಕರೆಸಿ ತನಿಖೆಯ ದಾರಿತಪ್ಪುವಂತೆ ವರ್ತಿಸಿರುವುದಾಗಿ ಆರೋಪಿಸಲಾಗಿದೆ. ಉತ್ತರೆಯ ತವರು ಮನೆಯವರ ದೂರಿನನ್ವಯ ಮೇಲಧಕಾರಿಗಳು ಬಳಿಕ ತನಿಖೆ ನಡೆಸಿ ಸಿಐ ಅವರನ್ನು ವರ್ಗಾಯಿಸುವ ತೀರ್ಮಾನ ಅನುಸರಿಸಿತು.
ಮೃತ ಉತ್ತರೆಗೆ ಹಾವು ಎರಡನೇ ಬಾರಿ ಕಚ್ಚಿರುವ ಬಗ್ಗೆ ಹಲವು ಸಂಶಯಗಳನ್ನು ವ್ಯಕ್ತಪಡಿಸಿದ್ದು ಸಮಗ್ರ ತನಿಖೆಗೆ ಒತ್ತಾಯಿಸಲಾಗಿತ್ತು. ಆದರೆ ಸಾವು ನಡೆದಿರುವ ದಿನ ಸ್ಥಳ ಸಂದರ್ಶನ ಹೊರತುಪಡಿಸಿ ಸಿಐ ಈ ಪ್ರಕರಣದ ಮುಂದಿನ ತನಿಖೆ ನಡೆಸಿರಲಿಲ್ಲ ಎಂದು ದೂರಲಾಗಿದೆ.


