ತಿರುವನಂತಪುರ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಅವರ ವಿವಾಹ ಜೂ.15 ರಂದು ಡಿ ವೈ ಎಫ್ ಐ ಅಖಿಲ ಭಾರತ ಅಧ್ಯಕ್ಷ ಮುಹಮ್ಮದ್ ರೀಯಾಝ್ ನೊಂದಿಗೆ ನಡೆಯಲಿರುವುದಾಗಿ ತಿಳಿದುಬಂದಿದೆ.
ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಸರಳ ವಿಧಿವಿಧಾನಗಳೊಂದಿಗೆ ಅತಿ ಹತ್ತಿರದ ಸಂಬಂಧಿಕರು ಮಾತ್ರ ಪಾಲ್ಗೊಳ್ಳುವರೆಂದು ಮೂಲಗಳಿಂದ ತಿಳಿಯಲಾಗಿದೆ.
ವೀಣಾ ವಿಜಯನ್ ಐಟಿ ಉದ್ಯೋಗಿಯಾಗಿರುವಳು. ಎಸ್ ಎಫ್ ಐ ಕಾರ್ಯಕರ್ತನಾಗಿ ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ಪ್ರವೇಶಿಸಿದ್ದ ರಿಯಾಸ್ ಡಿ ವೈ ಎಫ್ ಐ ರಾಜ್ಯ ಅಧ್ಯಕ್ಷನಾಗಿ ಬಳಿಕ ಇದೀಗ ರಾಷ್ಟ್ರಾಧ್ಯಕ್ಷ ಮಟ್ಟಕ್ಕೆ ಏರಿದವನಾಗಿದ್ದಾನೆ. ಜೊತೆಗೆ ಇವರಿಬ್ಬರಿಗೂ ಇದು ಎರಡನೇ ವಿವಾಹವಾಗಿರುವುದು ವಿಶೇಷವಾಗಿದೆ.
ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನ ಪ್ರಾರಂಭಿಸಿದ ರಿಯಾಸ್, ಡಿವೈಎಫ್‍ಐ ಸಂಘಟನೆಯ ರಾಜ್ಯ ಅಧ್ಯಕ್ಷರಾಗಿ ಎರಡು ಅವಧಿ ಕಾರ್ಯ ನಿರ್ವಹಿಸಿದ್ದಾರೆ. 2009ರ ಲೋಕಸಭಾ ಚುನಾವಣೆಯಲ್ಲಿ ಅವರು ಕೋಯಿಕ್ಕೋಡ್ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ನಾಯಕ ಎಂ.ಕೆ. ರಾಘವನ್ ವಿರುದ್ಧ ಸೋತರು. ವೀಣಾ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಿಯಾಗಿದ್ದಾರೆ.


