ಕೋಝಿಕ್ಕೋಡ್: ಕೊರೊನಾ ಉಂಟುಮಾಡಿರುವ ವಿಚಿತ್ರ ಭಯಾನಕ ಪ್ರಂಪಚ ಏನೆಲ್ಲವನ್ನು ಪ್ರತಿನಿತ್ಯ ಕಳವಳಕಾರಿಯಾಗಿಸುತ್ತದೆ ಎನ್ನುವ ಘಟನೆ ಮಂಗಳವಾರ ಕೇರಳದ ಕೋಝಿಕ್ಕೋಡಿನಲ್ಲಿ ಉಂಟಾಗಿದೆ.
ಕೋಝಿಕ್ಕೋಡಿನ ಆದಿರಾ ಎಂಬ ಮಹಿಳೆ ತುಂಬು ಗರ್ಭಿಣಿ, ದುಬೈ ನಿಂದ ಆಕೆಯ ಪತಿ ನಿತಿನ್ ಚಂದ್ರನ್ (28) ವಿದೇಶದಲ್ಲಿದ್ದು ಪತಿಯ ಅನುಪಸ್ಥಿತಿಯಲ್ಲಿ ಹೆರಿಗೆಯಾದರು. ಆದರೆ ಅಷ್ಟು ಮಾತ್ರವಲ್ಲದೆ ಪತಿ ನಿತಿನ್ ಚಂದ್ರ ವಿದೇಶದಲ್ಲಿ ಮೃತಪಟ್ಟಿದ್ದು ಪತ್ನಿ ಆದಿರ ಗೆ ಈ ವಿಷಯ ಇನ್ನೂ ತಿಳಿದಿಲ್ಲ. ಆಥಿರಾಗೆ ಹೆಣ್ಣು ಮಗು ಹೆರಿಗೆಯಾಗಿದೆ.
ನಿತಿನ್ ಚಂದ್ರನ್ ದಂಪತಿ, ಕೊರೋನಾ ಸಂದರ್ಭದಲ್ಲಿ ದುಬೈ ನಲ್ಲಿ ಸಿಲುಕಿದ್ದ ಭಾರತೀಯ ಮೂಲದವರು, ಪ್ರಮುಖವಾಗಿ ಗರ್ಭಿಣಿ ಮಹಿಳೆಯರು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಸಹಾಯ ಮಾಡಿದ್ದರು. ಕೋವಿಡ್-19 ಲಾಕ್ ಡೌನ್ ಇರಬೇಕಾದರೆ ವಲಸಿಗರನ್ನು ಶೀಘ್ರವೇ ಅವರ ಮನೆಗಳಿಗೆ ವಾಪಾಸು ಕಳುಹಿಸಲು ಮನವಿ ಮಾಡಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಆದಿರಾ ಹೆರಿಗೆಗಾಗಿ ಒಂದು ತಿಂಗಳ ಮುಂಚೆಯೇ ಭಾರತಕ್ಕೆ ಆಗಮಿಸಿದ್ದರು. ಆದರೆ ನಿತಿನ್ ಚಂದ್ರನ್ ಗೆ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಅನಾರೋಗ್ಯ ಕಾಡುತ್ತಿತ್ತು. ಸೋಮವಾರ ತೀವ್ರ ಅನಾರೋಗ್ಯದಿಂದ ನಿತಿನ್ ಚಂದ್ರನ್ ದುಬೈ ನಲ್ಲಿ ಮೃತಪಟ್ಟಿದ್ದಾರೆ. ಈ ಮಾಹಿತಿ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಕಾಣಿಸುತ್ತಿದ್ದಂತೆಯೇ ಅದಿರಾ ಕುಟುಂಬ ಸದಸ್ಯರು ಆಕೆಯನ್ನು ಕೋಯಿಕ್ಕೋಡ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ಸ್ಥಿತಿಯನ್ನು ಗಮನಿಸಿದ ವೈದ್ಯರು ಅವಧಿಗೂ ಮೊದಲು ಸಿಸೇರಿಯನ್ ಮಾಡಿ ಹೆರಿಗೆ ಮಾಡಿಸಿದರು. ಪತಿಯ ವಿಯೋಗದ ನಡುವೆಯೇ ಆದಿರಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.
ದುಬೈ ನ ಇಂಟನ್ರ್ಯಾಷನಲ್ ಸಿಟಿ ಅಪಾಟ್ಮೆರ್ಂಟ್ ನಲ್ಲಿ ನಿತಿನ್ ಮೃತಪಟ್ಟಿದ್ದಾರೆ. ಇದಕ್ಕೂ ಮೊದಲು ನಿತಿನ್ ತೀವ್ರ ಅನಾರೋಗ್ಯಕ್ಕೀಡಾಗಿರುವುದನ್ನು ಅಲ್ಲಿನ ಅವರ ಸ್ನೇಹಿತರು ಸಂಬಂಧಿಕರು ಕೇರಳದಲ್ಲಿರುವ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. ಆಸ್ಪತ್ರೆಗೆ ತೆರಳುವುದಕ್ಕೂ ಮೊದಲು ತಾನು ನಿತಿನ್ ಜೊತೆ ಮಾತನಾಡಬೇಕೆಂದು ಆದಿರಾ ಪಟ್ಟು ಹಿಡಿದರೂ ಸಾವಿನ ಒತ್ತಡ ಆಕೆಗೆ ಮುಳುವಾಗಬಹುದೆಂದು ಕುಟುಂಬ ಸದಸ್ಯರು ಪರಿಸ್ಥಿತಿಯನ್ನು ನಿಭಾಯಿಸಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಿತಿನ್ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಯತ್ನಿಸುತ್ತಿದ್ದಾರೆ.



