ಕಾಸರಗೋಡು: ಕೇರಳ ಖಾದಿಗ್ರಾಮ ಉದ್ದಿಮೆ ಮಂಡಳಿ ವ್ಯಾಪ್ತಿಯ ಮಾರಾಟ ಕೇಂದ್ರಗಳಲ್ಲಿ ಖಾದಿ ಬಟ್ಟೆ ಖರೀದಿ ವೇಳೆ ಶೇ.20ರ ನಾಮಿನಲ್ ರಿಯಾತಿಯಲ್ಲದೆ, ಶೇ.10 ವಿಶೇಷ ರಿಯಾಯಿತಿ ಮಂಜೂರು ಮಾಡಲಾಗಿದೆ ಎಂದು ಯೋಜನಾಧಿಕಾರಿ ತಿಳಿಸಿರುವರು.
ಓಣಂ, ಬಕ್ರೀದ್ ಹಬ್ಬಗಳ ಹಿನ್ನೆಲೆಯಲ್ಲಿ ಆ.30 ವರೆಗೆ ಈ ಸೌಲಭ್ಯವಿರುವುದು ಎಂದವರು ಹೇಳಿದರು. ಸರಕಾರಿ, ಅರೆ ಸರಕಾರಿ ಸಿಬ್ಬಂದಿಗೆ ಒಂದು ಲಕ್ಷ ರೂ. ವರೆಗೆ ಕ್ರೆಡಿಟ್ ಸೌಲಭ್ಯ ಇರುವುದು. ಕಾಸರಗೋಡು ಜಿಲ್ಲೆಯಲ್ಲಿ ಕಾಸರಗೋಡು ನಗರ, ಮುಳ್ಳೇರಿಯ, ಕುಂಡಂಕುಳಿ, ಕಾಂಞಂಗಾಡ್ ಟೌನ್, ರಾಮನಗರ, ನೀಲೇಶ್ವರ, ತ್ರಿಕರಿಪುರ, ಪಾಲಕುನ್ನು, ಮಾಡಕ್ಕರ ಪ್ರದೇಶಗಳ ಮಾರಾಟ ಕೇಂದ್ರಗಳಲ್ಲಿ ಈ ಸ್ಪೆಷ್ಯಲ್ ರಿಬೇಟ್ ಲಭ್ಯವಿದೆ ಎಂದು ಅವರು ಹೇಳಿರುವರು.


