ಕಾಸರಗೋಡು: ಓಣಂ-ಬಕ್ರೀದ್ ಖಾದಿ ಮೇಳದ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಬುಧವಾರ ಜರುಗಿತು.
ಕಾಞಂಗಾಡು ರಾಮನಗರದ ಖಾದಿ ಮಾರಾಟ ಕೇಂದ್ರದಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಅಜಾನೂರು ಗ್ರಾಮಪಂಚಾಯತ್ ಸದಸ್ಯ ಕೆ.ಎ.ಗೋಪಾಲನ್ ಮೇಳವನ್ನು ಉದ್ಘಾಟಿಸಿದರು. ಪಿ.ಕೆ.ಸಿ. ನಿರ್ದೇಶಕ ಪಿ.ಸುರೇಶನ್, ಸಹಾಯಕ ನಿರ್ದೇಶಕ ಕೆ.ಪಿ.ದಿನೇಶ್ ಕುಮಾರ್, ಯೋಜನಾಧಿಕಾರಿ ಕೆ.ವಿ.ರಾಜೇಶ್, ಪಿ.ಸುಭಾಷ್, ಪಿ.ಕುಂಞÂ ಕೃಷ್ಣನ್, ಬೀನಾ ಕೆ. ಉಪಸ್ಥಿತರಿದ್ದರು.
ಆ.30 ವರೆಗೆ ಕೇರಳ ಖಾದಿ ಗ್ರಾಮೋದ್ಯಮ ಮಂಡಳಿ ವ್ಯಾಪ್ತಿಯ ಮಾರಾಟ ಕೇಂದ್ರಗಳಲ್ಲಿ ಖಾದಿ ಬಟ್ಟೆಗಳಿಗೆ ಶೇ 30 ವರೆಗಿನ ರಿಬೇಟ್ ಇರುವುದು. ಸರಕಾರಿ-ಅರೆ ಸರಕಾರಿ ಸಿಬ್ಬಂದಿಗೆ ಒಂದು ಲಕ್ಷ ರೂ. ವರೆಗಿನ ಕ್ರೆಡಿಟ್ ಸೌಲಭ್ಯ ಇರುವುದು. ಕಾಸರಗೋಡು, ಮುಳ್ಳೇರಿಯ, ಕುಂಡಂಕುಳಿ, ಕಾಲಿಕಡವು, ಪಾಲಕುನ್ನು, ನೀಲೇಶ್ವರ, ತ್ರಿಕರಿಪುರ ಮಾರಾಟ ಕೇಂದ್ರಗಳಲ್ಲಿ ವಿಶೇಷ ರಿಬೇಟ್ ಇರುವುದು.

