ಕೊಟ್ಟಾಯಂ: ಅಮೆರಿಕದ ಆಸ್ಪತ್ರೆಯೊಂದರದಲ್ಲಿ ಕೆಲಸ ಮಾಡುತ್ತಿದ್ದ ಮಲೆಯಾಳಿ ನರ್ಸ್ ನರ್ಸ್ ಒಬ್ಬರನ್ನು ಅವರ ಪತಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಮಂಗಳವಾರ ದಕ್ಷಿಣ ಫ್ಲೋರಿಡಾದಲ್ಲಿ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ಕೇರಳದ ಕೊಟ್ಟಾಯಂ ಮೂಲದ ನರ್ಸ್ ಮೆರಿನ್ ಜಾಯ್(26) ಎಂದು ಗುರುತಿಸಲಾಗಿದ್ದು, ಕೋರಲ್ ಸ್ಪ್ರಿಂಗ್ಸ್ ಆಸ್ಪತ್ರೆಯಿಂದ ಹೊರನಡೆಯುತ್ತಿದ್ದಾಗ ಪತಿ ಫಿಲಿಪ್ ಮ್ಯಾಥ್ಯೂ ಅಲಿಯಾಸ್ ನವೀನ್, ಮೆರಿನ್ ಅವರನ್ನು ತನ್ನ ಬಳಿಗೆ ಎಳೆದು ಹಲವು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಮೆರಿನ್ ಜಾಯ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಕೊನೆ ಉಸಿರೆಳೆದರು ಎಂದು ಕೋರಲ್ ಸ್ಪ್ರಿಂಗ್ಸ್ ಪೊಲೀಸ್ ಉಪ ಮುಖ್ಯಸ್ಥ ಬ್ರಾಡ್ ಮೆಕ್‌ಕೀನ್ ತಿಳಿಸಿದ್ದಾರೆ.
ಪತಿ ಫಿಲಿಪ್ ಮ್ಯಾಥ್ಯೂ ಅವರನ್ನು ಬಂಧಿಸಲಾಗಿದೆ. ಮೆರಿನ್ ಜಾಯ್ ಮತ್ತು ಮ್ಯಾಥ್ಯೂ ನಡುವಿನ ಕೌಟುಂಬಿಕ ಕಲಹವೇ ಮೆರಿನ್ ಹತ್ಯೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.


