HEALTH TIPS

ಮತ್ತೆ ಲಾಕ್ ಡೌನ್ ನತ್ತ ಕೇರಳ? ಇಂದು ಕ್ಯಾಬಿನೆಟ್ ಸಭೆ

     
             ತಿರುವನಂತಪುರ: ಬುಧವಾರ ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರಲ್ಲಿ ಸಾವಿರದ ಗಡಿ ದಾಟಿರುವ ಅತೀ ಹೆಚ್ಚು ವರದಿಗಳು ಪ್ರಕಟಗೊಳ್ಳುತ್ತಿರುವಂತೆ ಮತ್ತೆ ಲಾಕ್ ಡೌನ್ ಸದ್ದು ಮಾಡತೊಡಗಿದೆ. ನಿನ್ನೆಯ ವರದಿಗಳಿಗೆ ಅನುಸಾರ 785 ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 57 ರ ಸಂಪರ್ಕ ವಿವರಗಳು ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ, ಇಂದು ನಡೆಯುತ್ತಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ರಕ್ಷಣಾ ಕ್ರಮಗಳನ್ನು ಬಲಪಡಿಸುವ ಭಾಗವಾಗಿ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ವಿಸ್ಕøತ ಚರ್ಚೆ ನಡೆಯಲಿದೆ. ನಿನ್ನೆ ಕೋವಿಡ್ ಪರಿಶೀಲನೆಯ ನಂತರ ಸ್ವತಃ ಮುಖ್ಯಮಂತ್ರಿಗಳೇ ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಬೇಕಾದ ಬಗ್ಗೆ ಸಾಧ್ಯತೆಗಳನ್ನು ಪರಿಶೀಲಿಸುವ ಸೂಚನೆಯನ್ನೂ ನೀಡಿದ್ದರು.
                           ಪ್ರಸ್ತುತ ನಿರ್ಬಂಧಗಳು:
         ರೋಗವು ವ್ಯಾಪಿಸಿರುವ ಅನೇಕ ಪ್ರದೇಶಗಳಲ್ಲಿ ರಾಜ್ಯವು ಲಾಕ್ ಡೌನ್‍ಗಳನ್ನು ಬಿಗಿಗೊಳಿಸಿದೆ. ರಾಜಧಾನಿ ಸ್ವತಃ ಕಳೆದ ಕೆಲವು ದಿನಗಳಿಂದ ಟ್ರಿಪಲ್ ಲಾಕ್‍ಡೌನ್ ಮೂಲಕ ಸಾಗುತ್ತಿದೆ. ಕರಾವಳಿ ಪ್ರದೇಶಗಳಲ್ಲಿ ರೋಗ ಹರಡಿದ ವ್ಯಾಪ್ತಿಯಲ್ಲಿ ಲಾಕ್ ಡೌನ್‍ಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಮೊದಲು, ಹಲವಾರು ಕೋವಿಡ್ ಕ್ಲಸ್ಟರ್‍ಗಳನ್ನು ಕೇಂದ್ರೀಕರಿಸಿ ಟ್ರಿಪಲ್ ಲಾಕ್-ಡೌನ್ ಘೋಷಿಸಲಾಗಿತ್ತು. ಮತ್ತು ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ನಿರ್ಬಂಧಗಳಲ್ಲಿ ವಿನಾಯ್ತಿ ನೀಡಲಾಯಿತು. ಈ ಸಂದರ್ಭದಲ್ಲಿ, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಏರಿಕೆಯಾದ ಕಾರಣ ಮತ್ತೆ ಸಂಪೂರ್ಣ ಲಾಕ್-ಡೌನ್ ಆಗುವ ಸಾಧ್ಯತೆಯಿದೆ.
                     ಮುಖ್ಯಮಂತ್ರಿ ಹೇಳಿದ್ದೇನು!:
        ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ಸಂಪೂರ್ಣ ಲಾಕ್ ಡೌನ್ ಹೇರುವ ಬಗ್ಗೆ ಸರ್ಕಾರವು  ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಹೇಳಿದರು. ತಜ್ಞರು ಮತ್ತು ಇತರರು ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಹೇರಲು ಒತ್ತಾಯಿಸುತ್ತಿದ್ದಾರೆ ಮತ್ತು ಈ ಬಗ್ಗೆ ಯಾವುದೇ ಹಿಂದೆ-ಮುಂದೆ ನೋಡುವ ಪ್ರಮೇಯ ಎದುರಾಗದು ಎಂದು ಅವರು ಹೇಳಿದ್ದಾರೆ. 'ಎಲ್ಲವನ್ನೂ ಪರಿಶೀಲಿಸಿದ ನಂತರ ಲಾಕ್ ಡೌನ್ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಂಪೂರ್ಣ ಲಾಕ್ ಡೌನ್ ಸಮಸ್ಯೆಯನ್ನು ಪರಿಗಣಿಸಬೇಕಾಗುತ್ತದೆ. ಯಾವುದೇ ಗಂಭೀರ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸಿದ್ಧವಾಗಿದೆ. "ರಾಜಧಾನಿ ಸೇರಿದಂತೆ ಪರಿಸ್ಥಿತಿ ಹದಗೆಡುತ್ತಿದೆ" ಎಂದು ಅವರು ಹೇಳಿದರು.
                   ಇಂದು ಕ್ಯಾಬಿನೆಟ್ ಸಭೆ:
       ರಾಜ್ಯ ಸಚಿವ ಸಭೆ ಇಂದು ಸೇರಲಿದೆ. ಅಸೆಂಬ್ಲಿ ಅಧಿವೇಶನದಂತಹ ವಿಷಯಗಳು ಕಾರ್ಯಸೂಚಿಯಲ್ಲಿದ್ದರೂ, ಲಾಕ್ ಡೌನ್ ವಿಷಯದ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನಿರೀಕ್ಷಿಸಲಾಗಿದೆ. ರಾಜಧಾನಿಯಲ್ಲಿ ಕೋವಿಡ್ ಹರಡುವಿಕೆ ಹೆಚ್ಚುತ್ತಿರುವ ಕಾರಣ ಜುಲೈ 27 ರಂದು ವಿಧಾನಸಭೆ ಕರೆಯದಿರಲು ಸರ್ಕಾರ ನಿರ್ಧರಿಸಿದೆ. ಇಂದಿನ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು. ಹಣಕಾಸು ಮಸೂದೆಯ ಸುಗ್ರೀವಾಜ್ಞೆಯೂ ಪರಿಗಣನೆಯಲ್ಲಿದೆ.
                    ವಿವಿಧ ರಾಜ್ಯಗಳಲ್ಲಿ ಸಂಪೂರ್ಣ ಲಾಕ್ ಡೌನ್:
      ಕೋವಿಡ್ ಏಕಾಏಕಿ ತೀವ್ರಗೊಳ್ಳುತ್ತಿದ್ದಂತೆ, ವಿವಿಧ ರಾಜ್ಯಗಳು ಸಂಪೂರ್ಣ ಲಾಕ್ ಡೌನ್‍ಗೆ ಹೇರಿದೆ. ಪಶ್ಚಿಮ ಬಂಗಾಳದಲ್ಲಿ ಸಂಪೂರ್ಣ ಲಾಕ್ ಡೌನ್ ಇದೆ. ಕೋವಿಡ್ ಏಕಾಏಕಿ ತೀವ್ರಗೊಳ್ಳುತ್ತಿದ್ದಂತೆ ಪ್ರತಿ ವಾರ ಎರಡು ದಿನ ಸಂಪೂರ್ಣ ಲಾಕ್‍ಡೌನ್ ವಿಧಿಸಲು ಬಂಗಾಲ ರಾಜ್ಯ ನಿರ್ಧರಿಸಿದೆ. ಈ ವಾರ ಗುರುವಾರ ಮತ್ತು ಶನಿವಾರ ನಿರ್ಬಂಧಗಳು ಜಾರಿಯಲ್ಲಿದೆ. ಇಂದಿನಿಂದ 14 ದಿನಗಳವರೆಗೆ ಮಣಿಪುರದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಾಳೆಯಿಂದ 10 ದಿನಗಳವರೆಗೆ ಸಂಪೂರ್ಣ ಲಾಕ್ ಡೌನ್ ನ್ನು ಸರ್ಕಾರ ಪ್ರಕಟಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries