ಬದಿಯಡ್ಕ: ಇತ್ತೀಚೆಗೆ ಅಸ್ತಂಗತರಾದ ಬಹುಭಾಷಾ ವಿದ್ವಾಂಸ, ಸಂಶೋಧಕ, ತುಳು ನಿಘಂಟು ರಚನೆಕಾರ ಉಡುಪಿಯ ಡಾ. ಯು.ಪಿ. ಉಪಾಧ್ಯಾಯ ಅವರ ನಿಧನಕ್ಕೆ ಬದಿಯಡ್ಕದ ತುಳುವೆರೆ ಆಯೊನೊ ಸಮಿತಿಯು ಗಾಢ ಶೋಕ ವ್ಯಕ್ತಪಡಿಸಿದೆ.
ಸಂಸ್ಕøತ, ಕನ್ನಡ ಭಾಷೆಗಳಲ್ಲಿ ಕೇರಳ, ಪುಣೆ, ಮದ್ರಾಸು ವಿವಿಗಳಿಂದ ಸ್ನಾತಕೋತ್ತರ ಪದವಿ ಪಡೆದ ಅವರು ಹಿಂದಿ ವಿದ್ವಾಂಸರೂ ಆಗಿ ಭಾಷಾ ವಿಚಾರದಲ್ಲೇ ಪಿಎಚ್‍ಡಿ ಹೊಂದಿದವರು. ಹಿಂದಿ, ಕನ್ನಡ, ತುಳು, ಮಲಯಾಳ, ತಮಿಳು, ಆಂಗ್ಲ, ಫ್ರೆಂಚ್ ಹಾಗೂ ಆಫ್ರಿಕಾದ ಸೆನೆಗಲ್‍ನ ಒಲೊಫ್ ಭಾಷಾ ತಜ್ಞರಾಗಿದ್ದರು. ಅವರ ಅಗಲುವಿಕೆಯು ಇಡೀ ಸಾಹಿತ್ಯ ಲೋಕಕ್ಕೆ, ವಿಶೇಷವಾಗಿ ತುಳು ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಟವೆಂದು ತುಳುವೆರೆ ಆಯೊನೊ ಸಮಿತಿ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿ" ಸೋಜಾ, ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ ಹಾಗೂ ಕೋಶಾಧಿಕಾರಿ ರವಿ ನಾಯ್ಕಾಪು ಅವರು ಸಂಯುಕ್ತ ಹೇಳಿಕೆಯಲ್ಲಿ ಸ್ಮರಿಸಿದ್ದಾರೆ.

