HEALTH TIPS

USIBC India Ideas Summit 2020 LIVE:ಭಾರತ-ಅಮೆರಿಕ ಉದ್ಯಮ ಶೃಂಗಸಭೆ: ಇಂದು ಮೋದಿ ಭಾಷಣ

             ನವದೆಹಲಿ: ಭಾರತ ಅಮೆರಿಕ ಉದ್ಯಮ ಮಂಡಳಿಯ 45ನೇ ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇಂದು ಮಾತನಾಡಲಿದ್ದಾರೆ.
        ಈ ಮಂಡಳಿ ಆರಂಭವಾಗಿ 45 ವರ್ಷ ದಾಟಿದ್ದು, ಇಂದಿನ ಶೃಂಗ ಸಭೆಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
           ಕೊವಿಡ್ 19, ಬದಲಾದ ಆರ್ಥಿಕ ಪರಿಸ್ಥಿತಿ, ಹಾಗೂ ಭಾರತ ಚೀನಾ ನಡುವಿನ ಸಂಘರ್ಷದ ಬೆನ್ನಲ್ಲೇ ಈ ಶೃಂಗಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮಹತ್ವ ಬಂದಿದೆ.
         ವಾಣಿಜ್ಯ ಸಮರ ಹಾಗೂ ಕೊವಿಡ್ 19ನಿಂದ ಜಾಗತಿಕ ಪೂರೈಕೆ ವ್ಯವಸ್ಥೆ ಸಂಪೂರ್ಣ ಬದಲಾಗಿದೆ ಇದನ್ನು ಅಮೆರಿಕ ಹಾಗೂ ಭಾರತ ಹೇಗೆ ಸಂಬಾಳಿಸಬಹುದು ಎಂಬುದರ ಕುರಿತು ಇಂದು ಚರ್ಚೆಯಾಗುವ ಸಾಧ್ಯತೆ ಇದೆ.
    ಇದರ ಜೊತೆಗೆ ಎಚ್‌1ಬಿ ವೀಸಾ ಕುರಿತು ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಶೃಂಗಸಭೆ ಹಾಗೂ ಮೋದಿ ಭಾಷಣದ ಕ್ಷಣ ಕ್ಷಣದ ಮಾಹಿತಿ ಒನ್ ಇಂಡಿಯಾ ಕನ್ನಡದಲ್ಲಿ ನಾವು ನೀಡಲಿದ್ದೇವೆ.
          ಈ ಕುರಿತು ಹೇಳಿಕೆ ನೀಡಿರುವ ಯುಎಸ್ಐಬಿಸಿ ಗ್ಲೋಬಲ್ ಬೋರ್ಡ್ ಅಧ್ಯಕ್ಷ ಮತ್ತು ನುವೀನ್ ಕಾರ್ಯನಿರ್ವಾಹಕ ಅಧ್ಯಕ್ಷ ವಿಜಯ್ ಅಡ್ವಾಣಿ, ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ನ 45 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರನ್ನು ಮಾತನ್ನು ಆಲಿಸಲು ನಾವು ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
           ಇಂದು ಸಂಜೆ 9 ಗಂಟೆಗೆ ಶೃಂಗ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. 
    5:07 PM, 22 JUL ಜುಲೈ 17 ರಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ವಿಡಿಯೋ ಭಾಷಣ ಮಾಡಿದ್ದರು. 
     5:07 PM, 22 JUL 2 ದಿನಗಳ ವರ್ಚುಯಲ್ ಅಥವಾ ವಾಸ್ತವಿಕ ಸಮಾವೇಶದಲ್ಲಿ ಉಭಯ ರಾಷ್ಟ್ರಗಳ ಪ್ರಮುಖ ನೀತಿ ನಿರೂಪಕರು ಪಾಲ್ಗೊಳ್ಳಲಿದ್ದಾರೆ. ಉದ್ಯಮ ಮತ್ತು ಸಾಮಾಜಿಕ ರಂಗದ ಉನ್ನತ ನಾಯಕರು, ರಾಷ್ಟ್ರೀಯ ಮಟ್ಟದ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
    5:07 PM, 22 JUL ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ವರ್ಜೀನಿಯಾ ಸೆನೆಟರ್ ಮಾರ್ಕ್ ವಾರ್ನರ್, ವಿಶ್ವಸಂಸ್ಥೆಯ ಅಮೆರಿಕ ಮಾಜಿ ಕಾರ್ಯದರ್ಶಿ ನಿಕ್ಕಿ ಹ್ಯಾಲೆ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. 
    5:06 PM, 22 JUL ಕೋವಿಡ್-19 ನಂತರದ ಜಗತ್ತನ್ನು ಕಟ್ಟಲು ಅಮೆರಿಕ - ಭಾರತದ ಪಾಲುದಾರಿಕೆ ಹೇಗೆ ನೆರವಾಗಲಿದೆ ಎಂಬ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ದೃಷ್ಟಿಕೋನ ವ್ಯಕ್ತಪಡಿಸಲಿದ್ದಾರೆ. 
     ಭಾರತ - ಅಮೆರಿಕ ಸಹಕಾರ ಮತ್ತು ಉಭಯ ರಾಷ್ಟ್ರಗಳ ಭವಿಷ್ಯದ ಸಂಬಂಧ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries