HEALTH TIPS

ಮಿಗ್-21 ಬೈಸನ್ ನಲ್ಲಿ ವಾಯುಸೇನಾ ಮುಖ್ಯಸ್ಥರ ಹಾರಾಟ; ಕಾರ್ಯಾಚರಣೆಯ ಸನ್ನದ್ಧತೆ ಪರಿಶೀಲನೆ

           ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಉದ್ವಿಗ್ನತೆಯ ನಡುವೆಯೇ, ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಗುರುವಾರ ವೆಸ್ಟರ್ನ್ ಏರ್ ಕಮಾಂಡ್‌ನ ಮುಖ್ಯ ವಾಯುನೆಲೆಗೆ ಭೇಟಿ ನೀಡಿ ಮಿಗ್ -21 ಬೈಸನ್ ಹಾರಾಟ ನಡೆಸಿದ್ದಾರೆ.

         “ಆರ್‌ಕೆಎಸ್ ಭದೌರಿಯಾ ವೆಸ್ಟರ್ನ್ ಏರ್ ಕಮಾಂಡ್ (ಡಬ್ಲ್ಯುಎಸಿ) ಯ ಮುಂಚೂಣಿಯ ವಾಯುನೆಲೆಗೆ ಭೇಟಿ ನೀಡಿದ್ದು, ಬೇಸ್‌ನ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಿದ್ದಾರೆ ಮತ್ತು ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದಾರೆ ಎಂದು ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ.

         ಏಕ ಇಂಜಿನ್ ಹಾಗೂ ಏಕ ಆಸನವನ್ನು ಹೊಂದಿರುವ ಮಿಗ್-21 ಬೈಸನ್ ಬಹುಮುಖ್ಯವಾದ ರಷ್ಯಾ ಮೂಲದ ಯುದ್ಧ ವಿಮಾನವಾಗಿದೆ. ಅನೇಕ ದಶಕಗಳ ಕಾಲ ಇದು ಭಾರತೀಯ ವಾಯುಪಡೆಯ ಬೆನ್ನೆಲುಬು ಆಗಿ ಕಾರ್ಯನಿರ್ವಹಿಸುತ್ತಿದೆ. 1971ರ ಭಾರತ- ಪಾಕಿಸ್ತಾನ ಯುದ್ಧದ ಸಂದರ್ಭದಲ್ಲೂ ಈ ಯುದ್ದ ವಿಮಾನ  ಪ್ರಮುಖವಾದ ಪಾತ್ರ ನಿರ್ವಹಿಸಿದೆ.

       ಕಳೆದ ಬಾರಿ, ಬಾಲಕೋಟ್ ವೈಮಾನಿಕ ದಾಳಿಯ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಾಯುಸೇನಾ  ಮುಖ್ಯಸ್ಥರು ಫೆಬ್ರವರಿ 26 ರಂದು ರಷ್ಯಾ ಮೂಲದ ಮಿಗ್ -21 ಬೈಸನ್ ನಲ್ಲಿ  ಹಾರಾಟ ನಡೆಸಿದ್ದರು.

      ಕಳೆದ ವಾರ ವೈಸ್ ಚೀಫ್ ಆಫ್ ಏರ್ ಸ್ಟಾಫ್ ಏರ್ ಮಾರ್ಷಲ್ ಹರ್ಜಿತ್ ಸಿಂಗ್ ಅರೊರಾ ಕೂಡಾ ಪೂರ್ವ ಲಡಾಖ್ ನ ವಾಸ್ತವ ನಿಯಂತ್ರಣ ರೇಖೆಗೆ ಭೇಟಿ ನೀಡಿದ್ದು, ವಾಯುಪಡೆ ಸಿದ್ಧತೆಗಳನ್ನು ಪರಿಶೀಲಿಸಿದ್ದರು. ವಿಶ್ವದ ಎತ್ತರದ ಸ್ಥಳಗಳಲ್ಲಿ ಒಂದಾಗಿರುವ ದೌಲತ್ ಬೇಗ್ ಓಲ್ಡಿಗೂ ಭೇಟಿ ನೀಡಿದ್ದರು. ಏರ್ ಬೇಸ್  16,600 ಅಡಿಗಳಷ್ಟು
 ಎತ್ತರದಲ್ಲಿದೆ.

       ಪೂರ್ವ ಲಡಾಖ್ ನ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಕಳೆದ ಎರಡು ತಿಂಗಳಲ್ಲಿ ಸುಕೊಯ್ 30 ಎಂಕೆಐ, ಜಾಗ್ವರ್, ಮೀರಾಜ್ 2000 ವಿಮಾನ ಸೇರಿದಂತೆ ಬಹುತೇಕ ಎಲ್ಲಾ ಯುದ್ದದ ವಿಮಾನಗಳನ್ನು ಭಾರತೀಯ ವಾಯುಪಡೆ ನಿಯೋಜಿಸಿದೆ. ಸೈನಿಕರನ್ನು ಸಾಗಿಸುವ ಚಿನೂಕ್, ಅಪಾಚಿಯಂತಹ ಹೆಲಿಕಾಪ್ಟರ್ ಗಳನ್ನು ಕೂಡಾ ಅಲ್ಲಿ ನಿಯೋಜಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries