HEALTH TIPS

ದೇಶದಲ್ಲಿ 3 ಕೋಟಿ ಗಡಿ ದಾಟಿದ ಕೋವಿಡ್-19 ಪರೀಕ್ಷೆ

         ನವದೆಹಲಿ: ದೇಶದಲ್ಲಿ ಕೋವಿಡ್-19 ಸೋಂಕು ಪತ್ತೆಗಾಗಿ ಒಟ್ಟಾರೇ  ಪರೀಕ್ಷೆಗಳ ಸಂಖ್ಯೆ 3 ಕೋಟಿ ಗಡಿ ದಾಟಿದೆ. ಡಿಜಿಟಲ್ ಲ್ಯಾಬ್ ನೆಟ್ ವರ್ಕ್ ಮತ್ತು ದೇಶಾದ್ಯಂತ ಸುಲಭ ಪರೀಕ್ಷೆಯ ಮೂಲಕ ಹೊಸ ಮೈಲುಗಲ್ಲು ಸಾಧಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

       ಭಾನುವಾರ 7 ಲಕ್ಷದ 31 ಸಾವಿರದ 697 ಪರೀಕ್ಷೆ ಸೇರಿದಂತೆ ಆಗಸ್ಟ್ 16ರವರೆಗೂ 3,00,14, 400 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಹೇಳಿದೆ.

    ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿರಂತರ,ಸಮನ್ವಯತೆಯ ಪ್ರಯತ್ನದಿಂದ ದೇಶದಲ್ಲಿ ಮೂರು ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

    ಕಳೆದ 24 ಗಂಟೆಗಳ ಅವಧಿಯಲ್ಲಿ 7,31,697 ಪರೀಕ್ಷೆಗಳನ್ನು ನಡೆಸಲಾಗಿದ್ದು, ಪ್ರತಿದಿನ ಪರೀಕ್ಷೆ ಸಾಮರ್ಥ್ಯವನ್ನು 10ಕ್ಕೆ ಏರಿಸಲಾಗಿದ್ದು, ಅತ್ಯುತ್ತಮ ಸಾಧನೆ ಮಾಡಲಾಗಿದೆ.ಜುಲೈ 14ರಿಂದ 1.2 ಕೋಟಿಯಲ್ಲಿದ್ದ ಪರೀಕ್ಷೆ ಸಂಖ್ಯೆ ಆಗಸ್ಟ್ 16ರವರೆಗೆ ಮೂರು ಕೋಟಿ ಆಗಿದೆ. ಇದೇ ಅವಧಿಯಲ್ಲಿ ಪಾಸಿಟಿವ್ ದರ ಶೇ. 7. 5 ರಿಂದ 8.81ಕ್ಕೆ ಏರಿಕೆಯಾಗಿದ್ದು, ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries