ತಿರುವನಂತಪುರ: ಓಣಂ ಆಚರಣೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ನಡೆಸಬಾರದು ಎಂದು ರಾಜ್ಯ ಸರ್ಕಾರ ಹೇಳಿದೆ. ಕೋವಿಡ್ -19 ನಿಬರ್ಂಧಗಳು ಜಾರಿಯಲ್ಲಿರುವುದರಿಂದ ಓಣಂ ಭೋಜನ ಮತ್ತು ಆಚರಣೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ನಡೆಸಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ನಿಯಮಗಳನ್ನು ಅನುಸರಿಸಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಓಣಂ ಆಚರಿಸಲು ವ್ಯವಸ್ಥೆ ಮಾಡಲಾಗುವುದು. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಅಂತರ ಒಳಗೊಂಡಂತೆ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪೆÇಲೀಸರು ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಬೇಕು ಎಂದು ನಿರ್ಧರಿಸಲಾಗಿದೆ.
ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಅಂಗಡಿಗಳು ತೆರೆದಿರುತ್ತವೆ. ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳು ಸಾಮಾಜಿಕ ದೂರದಲ್ಲಿ ಕಾರ್ಯನಿರ್ವಹಿಸಬಹುದು. ನಿಯಮಿತ ಅಂತರದಲ್ಲಿ ಸೋಂಕುರಹಿತತೆಯನ್ನು ಖಚಿತಪಡಿಸಬೇಕು. ರಾತ್ರಿ 9 ಗಂಟೆಯವರೆಗೆ ಹೋಟೆಲ್‍ಗಳು ಕಾರ್ಯನಿರ್ವಹಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಅಗತ್ಯ ಸೂಚನೆಗಳನ್ನು ಅನುಸರಿಸಲು ಮತ್ತು ಕಾರ್ಯಗತಗೊಳಿಸಲು ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಸಭೆ ಕರೆಯುವಂತೆ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುವರು.
ಓಣಂ ಋತುವಿನ ಕಾರಣ ಹೆಚ್ಚಿನ ಜನರು ರಾಜ್ಯಕ್ಕೆ ಆಗಮಿಸಬಹುದು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅವರಿಗೆ ಅಗತ್ಯವಾದ ಆರೈಕೆ ಮತ್ತು ಪರೀಕ್ಷೆಯನ್ನು ನಡೆಸಬೇಕು. ಇತರ ರಾಜ್ಯಗಳಿಂದ ಕೇರಳಕ್ಕೆ ಆಮದಾಗುವ ಅನೇಕ ಹೂವುಗಳನ್ನು ತರಿಸುವಲ್ಲಿ, ವಿಕ್ರಯಿಸುವಲ್ಲಿ, ಬಳಸುವಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇವುಗಳನ್ನು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿದೆ.
ಹೆಚ್ಚುತ್ತಿರುವ ಕೋವಿಡ್ ಬಾಧಿತರನ್ನು ಗಮನದಲ್ಲಿಟ್ಟು ತಿರುವನಂತಪುರದ ಪೂಜಾಪ್ಪುರ ಕೇಂದ್ರ ಕಾರಾಗೃಹದಲ್ಲಿ ಕೋವಿಡ್ ಮೊದಲ ಸಾಲಿನ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಕೋವಿಡ್ ಬ್ರಿಗೇಡ್ ವಿಶೇಷ ತಂಡವನ್ನು ಜೈಲಿನಲ್ಲಿ ನಿಯೋಜಿಸಲಾಗುವುದು. 65 ವರ್ಷಕ್ಕಿಂತ ಮೇಲ್ಪಟ್ಟ ಕೈದಿಗಳಿಗೆ ಪೆರೋಲ್ ನೀಡುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಸಿಎಂ ಅವರು ಗೃಹ ವ್ಯವಹಾರಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಜೈಲಿನ ಡಿಜಿಪಿಗೆ ನಿರ್ದೇಶನ ನೀಡಿರುವರು.


