ಬೆಂಗಳೂರು: ಕರ್ನಾಟಕ ಸರ್ಕಾರವು ಲಾಕ್‌ಡೌನ್ ನಿಯಮವನ್ನು ಹಂತಹಂತವಾಗಿ ಸಡಿಲಿಕೆ ಮಾಡುತ್ತಿದೆ.ಹಾಗೆಯೇ ಬೇರ ರಾಜ್ಯಗಳ ಪ್ರಯಾಣಿಕರು ಕರ್ನಾಟಕಕ್ಕೆ ಬರಬೇಕಾದರೆ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಪ್ರಕರಟಿಸಿದೆ. ಸೋಮವಾರ ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ.
ರದ್ದುಗೊಳಿಸಲಾದ ಸುತ್ತೋಲೆ:
ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದು -ರಾಜ್ಯದ ಗಡಿಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ವೈದ್ಯಕೀಯ ತಪಾಸಣೆ -ಜಿಲ್ಲೆಯ ಸ್ವೀಕರಿಸುವ ಕೇಂದ್ರಗಳಲ್ಲಿ ತಪಾಸಣೆ -ಪ್ರಯಾಣೀಕರ ವರ್ಗೀಕರಣ -ಕೈಗಳ ಮೇಲೆ ಮುದ್ರೆ ಹಾಕುವುದು -14 ದಿನಗಳ ಕ್ವಾರಂಟೈನ್ -ಬೇರ್ಪಡಿಸುವಿಕೆ ಹಾಗೂ ಪರೀಕ್ಷಿಸುವಿಕೆ -ಮನೆಯ ಬಾಗಿಲಿಗೆ ಪೋಸ್ಟರ್ ಹಚ್ಚುವುದು.
ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಸೂಚನೆ: -ಕೊವಿಡ್ ರೋಗ ಲಕ್ಷಣಗಳಿಲ್ಲದಿದ್ದೆ: ರಾಜ್ಯಕ್ಕೆ ಬರುವ ವೇಳೆ ಕೊವಿಡ್ 19 ರೋಗ ಲಕ್ಷಣಗಳಿಲ್ಲದಿದ್ದರೆ, 14 ದಿನಗಳ ಕ್ವಾರಂಟೈನ್ ಅಗತ್ಯವಿರುವುದಿಲ್ಲ, ಹಾಗೂ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಆದರೆ ಅವರು 14 ದಿನಗಳವರೆಗೆ ರೋಗದ ಲಕ್ಷಣಗಳಾದ ಕೆಮ್ಮು, ಜ್ವರ, ಶೀತ, ಗಂಟಲು ನೋವು, ಉಸಿರಾಟ ತೊಂದರೆ ಬಗ್ಗೆ ಸ್ವಯಂ ನಿಗಾವಹಿಸಬೇಕಿದೆ. ಆಪ್ತಮಿತ್ರ ಸಹಾಯವಾಣಿ 14410ಗೆ ಕರೆಮಾಡಬೇಕು. -ಕೊವಿಡ್ 19 ಲಕ್ಷಣಗಳಿದ್ದರೆ: ರಾಜ್ಯಕ್ಕೆ ಆಗಮನದ ವೇಳೆ ರೋಗದ ಲಕ್ಷಣವಿದ್ದರೆ , ತಕ್ಷಣವೇ ಸ್ವಯಂ ಪ್ರತ್ಯೇಕವಾಗಿರಬೇಕು ಮತ್ತು ತಪ್ಪದೇ ವೈದ್ಯಕೀಯ ಸಮಾಲೋಚನೆ ಪಡೆಯುವುದು ಅಥವಾ ಆಪ್ತಮಿತ್ರ ಸಹಾಯವಾಣಿಗೆ ಕರೆ ಮಾಡಬೇಕು. -ಕೊವಿಡ್ 19 ತಡೆಗಟ್ಟಲು ಫೇಸ್ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವುದು, 2 ಮೀಟರ್ ದೈಹಿಕ ಅಂತರ ಪಾಲಿಸಬೇಕು -ಇತರೆ ರಾಜ್ಯಗಳಿಂದ ಬರುವವರಿಗೆ ರೋಗ ಲಕ್ಷಣದ ಸ್ವಯಂ ವರದಿ ಮಾಡುವಿಕೆಯ ಮಹತ್ವ, ಸ್ವಯಂ ಪ್ರತ್ಯೇಕತೆ ಮತ್ತು ರೋಗ ಲಕ್ಷಣಗಳುಳ್ಳ ವ್ಯಕ್ತಿಗಳು ಕೊವಿಡ್ 19 ಪರೀಕ್ಷೆ ಮಾಡಿಸುವಾಗ ಬಿಬಿಎಂಪಿಯು ಸೂಕ್ತ ಅಭಿಯಾನ ಆಯೋಜಿಸುವುದು.


