HEALTH TIPS

ಪಿಎಸ್ಸಿ ಅಧ್ಯಕ್ಷರಿಗೆ ರಾಜನಿಗಿಂತ ಹೆಚ್ಚಿನ ರಾಜ ಭಕ್ತಿ ಇದೆ;ಖಾರ ಟೀಕೆಗಳೊಂದಿಗೆ ರಮೇಶ್ ಚೆನ್ನಿತ್ತಲ

  

            ತಿರುವನಂತಪುರ: ಪಿಎಸ್ಸಿ ಅಧ್ಯಕ್ಷರನ್ನು ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ತೀವ್ರವಾಗಿ ಟೀಕಿಸಿದ್ದಾರೆ. ಅಧ್ಯಕ್ಷರಿಗೆ ರಾಜನಿಗಿಂತ ಹೆಚ್ಚಿನ ರಾಜ ಭಕ್ತಿ ಇದೆ ಎಂದು ಅವರು ಆರೋಪಿಸಿದರು. ಗುತ್ತಿಗೆ ನೇಮಕಾತಿ ಮತ್ತು ಹಿಂಬಾಗಿಲಿನ ನೇಮಕಾತಿಗಳನ್ನು ಚೆನ್ನಿತ್ತಲ ಟೀಕಿಸಿದರು.

        'ಪಿಎಸ್‍ಸಿ ಅಧ್ಯಕ್ಷರು ಸರ್ಕಾರದ ದುಷ್ಕøತ್ಯಗಳನ್ನು ಸಮರ್ಥಿಸಲು ಹೊರಟಿದ್ದಾರೆ. ಪಿಎಸ್ಸಿ ಶ್ರೇಣಿಯ ಪಟ್ಟಿಗಳನ್ನು ಹಿಂದೆಂದಿಗಿಂತಲೂ ಧೂಳೀಪಟ ಮಾಡುವಾಗ ಗುತ್ತಿಗೆ ನೇಮಕಾತಿ ಮತ್ತು ಹಿಂಬಾಗಿಲಿನ ನೇಮಕಾತಿಗಳ ವಿರುದ್ಧ ನೌಕರರ ಪ್ರತಿಭಟನೆ ತಪ್ಪುಗ್ರಹಿಕೆಯಾಗಿದೆ ಎಂದು ಅಧ್ಯಕ್ಷರು ಹೇಳುವುದು ಆಕ್ಷೇಪಾರ್ಹ" ಎಂದು ಚೆನ್ನಿತ್ತಲ ಹೇಳಿದರು.

         ಯಾವುದೇ ಗುತ್ತಿಗೆ ನೇಮಕಾತಿಗಳನ್ನು ಮಾಡಲಾಗಿಲ್ಲ ಎಂಬ ಅಧ್ಯಕ್ಷರ ಹೇಳಿಕೆ ಆಶ್ಚರ್ಯಕರವಾಗಿದೆ. ಕನ್ಸಲ್ಟೆನ್ಸಿಗಳ ಮೂಲಕ ಗುತ್ತಿಗೆ ನೇಮಕಾತಿಗಳನ್ನು ಸರ್ಕಾರವೇ ಒಪ್ಪಿಕೊಂಡರೆ, ರಾಜನಿಗಿಂತ ಹೆಚ್ಚಿನ ರಾಜ ಭಕ್ತಿಯಿಂದಾಗಿ ಪಿಎಸ್‍ಸಿ ಅಧ್ಯಕ್ಷರು ಅದನ್ನು ನಿರಾಕರಿಸುತ್ತಿದ್ದಾರೆ. ಕೋವಿಡ್ ಮುಖವಾಡದ ಎಡೆಯಲ್ಲಿ ರಾಜ್ಯದಲ್ಲಿ ಪಿಎಸ್ಸಿ ಮೂಲಕ ನೇಮಕಾತಿಗಳನ್ನು ತಿಂಗಳುಗಳಿಂದ ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಸಾವಿರಾರು ಉದ್ಯೋಗಿಗಳು ನಿವೃತ್ತರಾಗಿ ಖಾಲಿ ಹುದ್ದೆಗಳು ಸೃಷ್ಟಿಯಾಗಿದ್ದರೂ ಸರಿಯಾದ ವರದಿ ಈವರೆಗೆ ಸಲಲಿಕೆಯಾಗಿಲ್ಲ ಎಂದು ಚೆನ್ನಿತ್ತಲ ತರಾಟೆಗೆ ತೆಗೆದುಕೊಂಡರು. 

        ಗುತ್ತಿಗೆ ನೇಮಕಾತಿಗಳನ್ನು ತಕ್ಷಣವೇ ಸ್ಥಗಿತಗೊಳಿಸಿ ಪಿಎಸ್‍ಸಿ ಮೂಲಕ ನೇಮಕಾತಿಗಳನ್ನು ಮಾಡಬೇಕೆಂದು ಅಧ್ಯಕ್ಷರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ 100 ಕ್ಕೂ ಹೆಚ್ಚು ಶ್ರೇಣಿಯ ಪಟ್ಟಿಗಳು ಕಾಲಾವಧಿ ಮೀರಿ ಅನೇಕರಿಗೆ ಅನ್ಯಾಯವಾಗಿದೆ.   ಸಿವಿಲ್ ಪೆÇಲೀಸ್ ಅಧಿಕಾರಿ, ಕೊನೆಯ ದರ್ಜೆ ನೌಕರ ಮತ್ತು ಇಂಗ್ಲಿಷ್ ಉಪನ್ಯಾಸಕರು ಸೇರಿದಂತೆ ಹಲವಾರು ಪಟ್ಟಿಗಳಿಗೆ ನಾಮಮಾತ್ರ ನೇಮಕಾತಿಗಳನ್ನು ಮಾಡಲಾಗಿದೆ. ದಾದಿಯರ ಶ್ರೇಣಿ ಪಟ್ಟಿ ಖಾಲಿಯಾದಾಗ, ನೂರಾರು ತಾತ್ಕಾಲಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತಿದೆ.ಇದರ ಹಿಂದೆ ದೊಡ್ಡ ಕಾರಸ್ಥಾನ ಅಡಗಿದೆ ಎಂದು ಚೆನ್ನಿತ್ತಲ ಹೇಳಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries