HEALTH TIPS

ಕೊರೊನಾ ಮಾನದಂಡದೊಂದಿಗೆ ಜಿಲ್ಲಾದ್ಯಂತ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ

    

           ಕಾಸರಗೋಡು: ಕೊರೊನಾ ಹಾಗೂ ನೆರೆಹಾವಳಿ ಸಂಕಷ್ಟದ ನಡುವೆಯೂ 74ನೇ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭ ಜಿಲ್ಲೆಯ ನಾನಾ ಕಡೆ ಸಂಭ್ರಮೋಲ್ಲಾಸದಿಂದ ನೆರವೇರಿತು. ಕೋವಿಡ್ ಮಾನದಂಡ ಪಾಲಿಸಿಕೊಂಡು ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿ ಒಳಗೊಂಡಂತೆ ವಿವಿಧ ಕಡೆ ಧ್ವಜಾರೋಹಣ ನಡೆಯಿತು.

       ಕಾಸರಗೋಡು ಪೆರಿಯದ ಕೇರಳ  ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ನೂತನ ಉಪ ಕುಲಪತಿ ಡಾ. ಎಚ್. ವೆಂಕಟೇಶ್ವರಲು ಧ್ವಜಾರೋಹಣ ನಡೆಸಿ ಮಾತನಾಡಿ, ಹೊಸ ರಾಷ್ಟ್ರೀಯ ವಿದ್ಯಾಭ್ಯಾಸ ನೀತಿ ಜೀವನ ನೈಪುಣ್ಯದ ಅಭಿವೃದ್ಧಿಗೆ ಸಹಕಾರಿಯಾಗಲಿರುವುದಾಗಿ ತಿಳಿಸಿದರು. ಕಾಸರಗೋಡು ದೇಳಿಯ ಸ-ಅದಿಯಾ ಆಟ್ರ್ಸ್ ಮತ್ತು ಸಯನ್ಸ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ ಧ್ವಜಾರೋಹಣ ನಡೆಸಿದರು. ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಹಾಗೂ ಮಹೇಶ್ವರೀ ಮಹಿಳಾ ಸಮಾಜ ವತಿಯಿಂದ ಕ್ಲಬ್ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಕ್ಲಬ್ ಅಧ್ಯಕ್ಷ ಪದ್ಮನಾಭ ಸುವರ್ಣ ಧ್ವಜಾರೋಹಣ ನಡೆಸಿದರು. ಕಾಸರಗೋಡು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ಮಾನ್ಯದ ಕೆ.ಸಿ.ಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಕೆ.ಸಿ.ಎ ಕೋಶಾಧಿಕಾರಿ ಕೆ.ಎಂ. ಅಬ್ದುಲ್ ರಹಮಾನ್ ಧ್ವಜಾರೋಹಣ ನಡೆಸಿದರು.

      

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries