ಮಂಜೇಶ್ವರ: ತುಳು ಭಾಷೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ಮಂಜೇಶ್ವರ ದುರ್ಗಿಪಳ್ಳದಲ್ಲಿ ಸ್ಥಾಪಿಸಿದ ಕೇರಳ ತುಳು ಅಕಾಡೆಮಿಯ ಪ್ರಧಾನ ಕಚೇರಿ ತುಳು ಭವನ ಉದ್ಘಾಟನೆಗೆ ಸಜ್ಜಾಗಿದೆ.
ಸೆಪ್ಟೆಂಬರ್ 18 ರಂದು ಸಂಜೆ 4 ಗಂಟೆಗೆ ಸಂಸ್ಕøತಿ ಸಚಿವ ಎ.ಕೆ.ಬಾಲನ್ ಅವರು ಆನ್‍ಲೈನ್‍ನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಮಾರಂಭದ ಕಂದಾಯ ಮತ್ತು ವಸತಿ ಸಚಿವ ಇ ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಾಸಕ ಎಂ.ಸಿ ಖಮರುದ್ದೀನ್ , ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ. ಬಶೀರ್, ಜಿಲ್ಲಾಧಿಕಾರಿ ಡಾ. ಡಿ ಸಜಿತ್ ಬಾಬು, ಬ್ಲಾಕ್ ಪಂಚಾಯತಿ ಜನ ಪ್ರತಿನಿಧಿಗಳು ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಉಪಸ್ಥಿತರಿರುವರು. ಈ ಸಂದರ್ಭ ತುಳುಸಂಶೋಧಕ ಡಾ. ವೆಂಕಟರಾಜ ಪುಣಿಂಚಿತಾಯ ಅವರ ಹೆಸರಿನ ಗ್ರಂಥಾಲಯವನ್ನು ಉದ್ಘಾಟಿಸಲಾಗುವುದು. ಇದು ಆನ್‍ಲೈನ್ ತುಳು ಸ್ಕ್ರಿಪ್ಟ್ ಕಲಿಕೆ ಕಾರ್ಯಕ್ರಮವನ್ನು ಸಹ ಪ್ರಾರಂಭಿಸಲಿದ್ದು ಅದು ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮತ್ತು ಸಾರ್ವಜನಿಕರಿಗೆ ಸಹಕಾರಿಯಾಗಲಿದೆ. ತುಳು ತ್ರೈಮಾಸಿಕ ತೆಂಬೆರೆ ಈ ಸಂದರ್ಭ ಬಿಡುಗಡೆಯಾಗಲಿದೆ. ಉದ್ಘಾಟನಾ ಸಮಾರಂಭವು ಕೋವಿಡ್ ನಿಬಂಧನೆಗಳಿಗೆ ಅನುಸಾರ ನಡೆಯಲಿದೆ.


