ಕುಂಬಳೆ: ಕೋವಿಡ್ ರಕ್ಷಣಾ ಚಟುವಟಿಕೆಗಳ ಭಾಗವಾಗಿ ಕಾಸರಗೋಡು ರೋಟರಿ ಕ್ಲಬ್ ಕುಂಬಳೆಯ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್‍ಸಿ)ಕ್ಕೆ ಉಪಕರಣಗಳನ್ನು ಕೊಡುಗೆಯಾಗಿ ನೀಡಿತು.
ಕೋವಿಡ್ ಬಾಧಿತರಾಗಿ ಮನೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಥರ್ಮಲ್ ಸ್ಕ್ಯಾನರ್, ಪಲ್ಸ್ ಆಸ್ಮೋಮೀಟರ್ ಮತ್ತು ಫೇಸ್ ಶೀಲ್ಡ್ ಅನ್ನು ಹಸ್ತಾಂತರಿಸಿಸಲಾಯಿತು.
ಕಾಸರಗೋಡು ಜನರಲ್ ಆಸ್ಪತ್ರೆ, ಕುಂಬಳೆ ಮತ್ತು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಗಳಿಗೆ ಈವರೆಗೆ 150 ಫೇಸ್ ಮಾಸ್ಕ್, 22 ಥರ್ಮಲ್ ಸ್ಕ್ಯಾನರ್ ಮತ್ತು 22 ಆಕ್ಸಿಮೀಟರ್ ನೀಡಲಾಗಿದೆ. ಉಪಕರಣಗಳನ್ನು ರೋಟರಿ ಇಂಟನ್ರ್ಯಾಷನಲ್ ಕೋವಿಡ್ ಕಂಟ್ರೋಲ್ ಫಂಡ್ ಒದಗಿಸುತ್ತದೆ.
ರೋಟರಿಯಂತಹ ಸಾರ್ವಜನಿಕ ಸಂಸ್ಥೆಗಳು ಇಂತಹ ಕೊಡುಗೆಗಳ ಮೂಲಕ ಅನುಕರಣೀಯ ಕೆಲಸವನ್ನು ಮಾಡಿರುವುದು ಪ್ರಶಂಸನೀಯ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿವಾಕರ ರೈ ತಿಳಿಸಿದರು. ಈ ರೀತಿಯ ಉಪಕರಣಗಳು ಇನ್ನೂ ಅಗತ್ಯವಿದೆ ಮತ್ತು ಸ್ವಯಂಸೇವಾ ಸಂಸ್ಥೆಗಳು ಇವುಗಳ ಪೂರೈಕೆಗೆ ಮುಂದೆ ಬರಬೇಕಿದೆ ಎಂದು ಅವರು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಡಾ. ಜನಾರ್ಧನ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಆರೋಗ್ಯ ಮೇಲ್ವಿಚಾರಕ ಬಿ ಅಶ್ರಫ್, ಆರೋಗ್ಯ ನಿರೀಕ್ಷಕ ಕುರಿಯಕೋಸ್ ಈಪನ್, ಕಿರಿಯ ಆರೋಗ್ಯ ನಿರೀಕ್ಷಕ ವಿವೇಕ್ ಮತ್ತು ಆದರ್ಶ್, ಸ್ಟಾಫ್ ನರ್ಸ್ ಬಿ ಸಜಿತಾ, ಆರೋಗ್ಯ ಕಾರ್ಯಕರ್ತರು ಶಾಜಿ, ಅಶೋಕನ್, ಸಿ.ವಿ.ಗಿರಿಜಾ, ಪಿ ಸುಂದರನ್ ಮತ್ತು ರೋಟರಿ ನಿರ್ದೇಶಕರು ಡಾ. ನಾರಾಯಣ ನಾಯಕ್ ಮತ್ತು ಹಮೀದ್ ಮೊಗ್ರಾಲ್ ಉಪಸ್ಥಿತರಿದ್ದರು.


