HEALTH TIPS

ಸತ್ಯ ಬೇರೆಯೇ ಇದೆ-ಕೊರೋನಾ ವೈರಾಣು ಬಗ್ಗೆ ಭೀಕರ ಸತ್ಯ ಬಹಿರಂಗಪಡಿಸಿದ ಚೀನಾ ವೈರಾಲಜಿಸ್ಟ್

       ವಾಶಿಂಗ್ಟನ್:   ಕೊರೋನಾ ಜಗತ್ತಿನಾದ್ಯಂತ ಹರಡತೊಡಗಿ 9 ತಿಂಗಳಾಗುತ್ತಾ ಬಂದಿದ್ದರೂ ಅದರ ಸೃಷ್ಟಿಯ ರಹಸ್ಯ ಇನ್ನೂ ಬಹಿರಂಗಗೊಂಡಿಲ್ಲ. 

      ಈ ನಡುವೆ ಕೊರೋನಾ ವೈರಾಣುವನ್ನು ಚೀನಾದ ವುಹಾನ್ ಪ್ರಯೋಗಾಲಯದಲ್ಲೇ ಮನುಷ್ಯರು ಸೃಷ್ಟಿಸಿದ್ದು ಎಂಬ ಗುಮಾನಿಗಳೂ ಬಂದಿದ್ದವು. ಇದಕ್ಕೆ ಪೂರಕವೆಂಬಂತೆ ಚೀನಾದ ವೈರಾಲಜಿಸ್ಟ್ ಒಬ್ಬರು ಕೊರೋನಾ ವೈರಾಣು ವುಹಾನ್ ನ ಸರ್ಕಾರಿ ಪ್ರಯೋಗಾಲಯದಲ್ಲಿ ಮನುಷ್ಯರೇ ನಿರ್ಮಿಸಿದ್ದು ಎಂಬ ಅಘಾತಕಾರಿ ಅಂಶವನ್ನು ಬಹಿರಂಗಗೊಳಿಸಿದ್ದು, ಇದನ್ನು ಸಾಬೀತುಪಡಿಸುವುದಕ್ಕೆ ತಮ್ಮ ಬಳಿ ಪುರಾವೆ ಇದೆ ಹೇಳಿದ್ದಾರೆ.  

      ಬ್ರಿಟೀಷ್ ಟಾಕ್ ಶೋ ನಲ್ಲಿ ಮಾತನಾಡಿರುವ ಚೀನಾ ವೈರಾಲಜಿಸ್ಟ್ ಡಾ. ಲೀ ಮೆಂಗ್ ಯಾನ್ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಹಾಂಕ್ ಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ವೈರಾಲಜಿ ಹಾಗೂ ಇಮ್ಯುನಾಲಜಿಯಲ್ಲಿ ಪರಿಣಿತರಾಗಿರುವ ಡಾ. ಲೀ ಮೆಂಗ್ ಯಾನ್ ಅವರಿಗೆ ವುಹಾನ್ ನಲ್ಲಿ ಕಂಡುಬಂದಿರುವ ಹೊಸ ನ್ಯುಮೋನಿಯಾವನ್ನು ಇನ್ವೆಸ್ಟಿಗಟ್ ಮಾಡುವ ಕೆಲಸಕ್ಕೆ ನಿಯೋಜಿಸಿದ್ದರು. ಈ ವೇಳೆ ಹಲವು ಮುಚ್ಚಿಹಾಕಿರುವ ಸಂಗತಿಗಳು ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಡಿಸೆಂಬರ್ ಹಾಗೂ ಜನವರಿ ಮಧ್ಯದಲ್ಲಿ ಒಟ್ಟು ಎರಡು ಬಾರಿ ಅಧ್ಯಯನ ನಡೆಸಿರುವ ಡಾ. ಲೀ ಮೆಂಗ್ ಈಗ ಅಮೆರಿಕಾದಲ್ಲಿದ್ದಾರೆ. 

       ತಮ್ಮ ಗಮನಕ್ಕೆ ಬಂದ ಅಂಶಗಳನ್ನು ತಮ್ಮ ಹಿರಿಯ ಅಧಿಕಾರಿ ಹಾಗೂ ಡಬ್ಲ್ಯುಹೆಚ್ಒಗೆ ತಿಳಿಸಲು ಯತ್ನಿಸಿದೆ. ಆದರೆ ನನಗೆ ಮೌನವಾಗಿರುವಂತೆ ಎಚ್ಚರಿಕೆ ನೀಡಲಾಯ್ತು.  ಚೀನಾದ ಕಮ್ಯುನಿಸ್ಟ್ ಪಕ್ಷ ಕೊರೋನಾಗೆ ಸಂಬಂಧಿಸಿದಂತೆ ನಿಸ್ಸಂಶಯವಾಗಿ ಮಾಹಿತಿಗಳನ್ನು ಮುಚ್ಚಿಡುತ್ತಿದೆ. ಇದು ಹೈ ಮ್ಯುಟೆಂಟ್ ವೈರಸ್ ಆಗಿದ್ದು, ಅತ್ಯಂತ ಅಪಾಯಕಾರಿಯೂ ಆಗಿದೆ ಎಂದು ಹೇಳಿದ್ದಾರೆ. 

      ಕೊರೋನಾ ವೈರಾಣು ನೈಸರ್ಗಿಕ ಸೃಷ್ಟಿಯಲ್ಲ, ಅದು ವುಹಾನ್ ನ ಸರ್ಕಾರಿ ನಿಯಂತ್ರಣದ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿರುವುದು, ಇದಕ್ಕೆ ಸಂಬಂಧಿಸಿದ ಅಧ್ಯಯನ ವರದಿಯನ್ನು ಶೀಘ್ರವೇ ಪ್ರಕಟಿಸುವುದಾಗಿ ಡಾ. ಲೀ ಮೆಂಗ್ ಯಾನ್ ಹೇಳಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries