Big Breaking-ಶಾಸಕನ ರಾಜೀನಾಮೆ ಆಗ್ರಹಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ಮೇಲೆ ಜಲಪಿರಂಗಿ ಪ್ರಯೋಗ!
0
ಸೆಪ್ಟೆಂಬರ್ 15, 2020
ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಪ್ರಮುಖ ಆರೋಪಿಯೆಂದು ದೂರಲಾದ ಬಹುಕೋಟಿ ರೂ.ಗಳ ಜುವೆಲ್ಲರಿ ಹಗರಣ ಸಂಬಂಧ ಶಾಸಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಇಂದು ಬೆಳಿಗ್ಗೆ ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿಗೆ ನಡೆಸಿದ ಮಾರ್ಚ್ ಮೇಲೆ ಪೋಲೀಸರು ಜಲ ಪಿರಂಗಿ ಪ್ರಯೋಗಿಸಿದ ಘಟನೆ ನಡೆದಿದೆ.

