ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಅಭಿನಯದ 'ಅಮೃತಮತಿ' ಚಿತ್ರವು ಈಗಾಗಲೇ ಆಸ್ಟ್ರಿಯಾ, ನೋಯ್ಡಾ ಮತ್ತು ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಈ ಪೈಕಿ ಅತ್ಯುತ್ತಮ ಅಭಿನಯಕ್ಕಾಗಿ ಹರಿಪ್ರಿಯಾ ಅವರಿಗೆ ನೋಯ್ಡಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.
ಅಮರಿಕಾದ ಬೋಸ್ಟನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಈ ಚಿತ್ರ ಆಯ್ಕೆಯಾಗಿದೆ. ಪ್ರಪಂಚದ ವಿವಿಧ ದೇಶಗಳ ಚಿತ್ರಗಳ ಜತೆಗೆ ಹೊಸ ಭಾರತೀಯ ಚಿತ್ರಗಳಿಗೆ ಅವಕಾಶ ಕೊಡುವ ಕಾರಣದಿಂದ ಈ ಚಿತ್ರೋತ್ಸವವನ್ನು 'ಇಂಡಿಯಾ ಇಂಟರ್ನ್ಯಾಷನಲ್ ಫೆಸ್ಟಿವಲ್' ಎಂಬ ಹೆಸರಿನಿಂದ ನಡೆಸಲಾಗುತ್ತಿರುವುದು ವಿಶೇಷ.



