ಕಾಸರಗೋಡು: ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ವಾರಸುದಾರರಿಲ್ಲದ ಅಜ್ಞಾತ ಸುಮಾರು 20 ಬ್ಯಾರೆಲ್ ಗಳನ್ನು ಪತ್ತೆಹಚ್ಚಲಾಗಿದ್ದು ಆಶ್ಚರ್ಯ, ಕುತೂಹಲಕ್ಕೆ ಕಾರಣವಾಗಿದೆ. ಕರಾವಳಿ ಪ್ರದೇಶಗಳಾದ ಚೆಂಬರಿಕಾ,
ಕೀಯೂರ್, ವಲಿಯಪರಂಬ ಮತ್ತು ಪಡನ್ನಕ್ಕಡಪ್ಪುರದಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆ ತೀರಕ್ಕೆ ಎಸೆಯಲ್ಪಟ್ಟ ರೀತಿಯಲ್ಲಿ ಬ್ಯಾರಲ್ ಗಳು ಕಂಡುಬಂದಿವೆ. 200 ಲೀಟರ್ ಬ್ಯಾರೆಲ್ ಗಳಲ್ಲಿ ಪೆಟ್ರೋಲ್ ಅಥವಾ ಕಚ್ಚಾ ತೈಲ ಇರಬಹುದು ಮತ್ತು ಯಾರೂ ಅವುಗಳನ್ನು ತೆರೆಯಬಾರದು ಎಂದು ಪೆÇಲೀಸರು ತಿಳಿಸಿದ್ದಾರೆ.
ಕರಾವಳಿ ನಿವಾಸಿಗಳು ಚೆಂಬರಿಕಾದಲ್ಲಿ ಸುಮಾರು 10 ಪೆಟ್ರೋಲ್ ಡ್ರಮ್‍ಗಳನ್ನು ಪತ್ತೆಹಚ್ಚಿರುವರು. ಸ್ಥಳೀಯರ ಮಾಹಿತಿ ಮೇರೆಗೆ ಮೆಲ್ಪರಂಬ ಪೆÇಲೀಸರು ಸ್ಥಳಕ್ಕೆ ತಲುಪಿ ಪೆಟ್ರೋಲ್ ಬ್ಯಾರೆಲ್‍ಗಳನ್ನು ನಿಲ್ದಾಣಕ್ಕೆ ಸ್ಥಳಾಂತರಿಸಿದರು. ಪಟ್ಲ ಪರಿಸರದ ಸಮುದ್ರ ತೀರದಲ್ಲಿರುವ ಇ.ಕೆ.ನಾಯನಾರ್ ಗ್ರಂಥಾಲಯದ ಬಳಿ ಬ್ಯಾರೆಲ್‍ಗಳು ಪತ್ತೆಯಾಗಿವೆ. ನೀಲೇಶ್ವರಂ ಅಜಿತಾಲಾ ಕರಾವಳಿ ಪೆÇಲೀಸರು ಬ್ಯಾರೆಲ್‍ಗಳನ್ನು ಪರಿಶೀಲಿಸಿದರು.
ತೈಲವಿರಬಹುದೆಂದು ಸಂಶಯಿಸಲಾಗಿದೆ. ಪೆÇಲೀಸರ ಪ್ರಕಾರ ಸಮುದ್ರ ಚಂಡಮಾರುತದಲ್ಲಿ ಧ್ವಂಸಗೊಂಡ ಹಡಗಿನಿಂದ ಇವು ಸಮುದ್ರ ಪಾಲಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಹಿಂದೆಯೂ ಒಮ್ಮೆ ಬ್ಯಾರೆಲ್ ಲಭ್ಯವಾದಾಗ ಹೈಡ್ರಾಲಿಕ್ ಎಣ್ಣೆ ಪತ್ತೆಯಾಗಿತ್ತೆಂದು ಪೆÇಲೀಸರು ತಿಳಿಸಿದ್ದಾರೆ. ಬ್ಯಾರೆಲ್ ಗಳನ್ನು ನಿಲ್ದಾಣಕ್ಕೆ ವರ್ಗಾಯಿಸಲಾಗಿದೆ. ಏತನ್ಮಧ್ಯೆ, ಹಡಗುಗಳು ಕರಾವಳಿ ಪ್ರದೇಶಗಳನ್ನು ತಲುಪಿದೆಯೇ ಎಂಬ ಬಗ್ಗೆ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.


