ಕಾಸರಗೋಡು: ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ.ವಿ.ಮನೋಜ್ ಕುಮಾರ್ ಮತ್ತು ಸದಸ್ಯ ಪಿ.ಪಿ.ಶ್ಯಾಮಲಾ ದೇವಿ ಅವರು ತ್ರಿಕ್ಕರಿಪುರ ಪಂಚಾಯತಿಯ ಉಡುಂಬಂತಲಾ ಅಂಗನವಾಡಿಗೆ ಭೇಟಿ ನೀಡಿದ್ದು, ಅಲ್ಲಿ ಗೋಡೆ ಕುಸಿದು ಅಪಾಯದಲ್ಲಿರುವುದನ್ನು ಗುರುತಿಸಿದೆ. ತೃತಕರಿಪುರ ಪಂಚಾಯತಿ ಅಧ್ಯಕ್ಷ ಪಿ.ಸಿ.ಫೌಜಿಯಾ ಮತ್ತು ಅಂಗನವಾಡಿ ಶಿಕ್ಷಕಿ ಸುಮತಿ ಅವರ ಸಮ್ಮುಖದಲ್ಲಿ ತಪಾಸಣೆ ನಡೆಸಲಾಯಿತು.
ರಾಜ್ಯ ಶಿಶುಪಾಲನೆ ಆಯೋಗದ ಅಧ್ಯಕ್ಷ ಕೆ.ವಿ. ಮನೋಜ್ ಕುಮಾರ್ ಮಾತನಾಡಿ, ಇಂತಹ ಶಿಥಿಲಗೊಂಡ ಅಂಗನವಾಡಿಗಳಲ್ಲಿ ಮಕ್ಕಳನ್ನು ಇರಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಜನರು ದೊಡ್ಡ ಸಂಷ್ಟವನ್ನು ಅನುಭವಿಸುತ್ತಿದ್ದಾರೆ. ಬಹಳ ಅಜಾಗರೂಕತೆಯಿಂದ ನಿರ್ವಹಿಸಲ್ಪಟ್ಟ ಈ ಕಟ್ಟಡವನ್ನು ಸುಸ್ಥಿಗೆ ತರಲು ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾ ಮಕ್ಕಳ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಿದರು.
ಉಡುಂಬಂತಲದಲ್ಲಿರುವ ಅಂಗನವಾಡಿ ಕಟ್ಟಡವನ್ನು ಎರಡು ವರ್ಷಗಳ ಹಿಂದೆ ಜಿಲ್ಲಾ ಪಂಚಾಯತಿ ಯೋಜನೆಯಡಿ 15 ಲಕ್ಷ ರೂ. ವ್ಯಯಿಸಿ ದುರಸ್ಥಿಗೊಳಿಸಲಾಗಿತ್ತು.ಅಂಗನವಾಡಿಯ ಗೋಡೆ ಅಪಾಯಕಾರಿಯಾಗಿ ಬಿರುಕು ಬಿಟ್ಟಿದೆ. ಮಕ್ಕಳ ಹಕ್ಕುಗಳ ಆಯೋಗವು ಅಂಗನವಾಡಿಯ ದುಃಸ್ಥಿತಿಯ ಬಗ್ಗೆ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿದುಕೊಂಡಿತು.
ಅಂಗನವಾಡಿಯಲ್ಲಿ ಸುಮಾರು 15 ಮಕ್ಕಳು ಓದುತ್ತಿದ್ದಾರೆ. ಇದು ಜಿಲ್ಲಾ ಪಂಚಾಯಿತಿಗೆ ಅತ್ಯಂತ ಮಹತ್ವಪೂರ್ಣವಾದ ಅಂಗನವಾಡಿಗಳಲ್ಲಿ ಒಂದಾಗಿದೆ. ಉದ್ಘಾಟನೆಗೆ ಮುಂಚಿತವಾಗಿ, ಕಟ್ಟಡದ ದಕ್ಷಿಣ ಭಾಗದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಪ್ಲ್ಯಾಸ್ಟರಿಂಗ್ ಮೂಲಕ ಕಟ್ಟಡವನ್ನು ಉದ್ಘಾಟನೆಗೆ ಸಿದ್ಧಪಡಿಸಲಾಗಿತ್ತು. ಬಳಿಕ ಬಿರುಕುಗಳು ವಿಸ್ಕøತಗೊಂಡು ಅಪಾಯಕಾರಿಯಾಗಿ ಮಾರ್ಪಟ್ಟವು. ದಕ್ಷಿಣ ಭಾಗದಲ್ಲಿರುವ ಶೌಚಾಲಯವೂ ಶಿಥಿಲಾವಸ್ಥೆಯಲ್ಲಿದೆ. ಮಕ್ಕಳು ಕುಳಿತುಕೊಳ್ಳುವ ಮುಖ್ಯ ಸಭಾಂಗಣದ ಮೇಲ್ಚಾವಣಿಗೆ ಹೆಂಚು ಹೊದೆಸಲಾಗಿದ್ದು ಸಭಾಂಗಣದಲ್ಲಿನ ಗೋಡೆ ಮಳೆಗೆ ಒದ್ದೆಯಾಗಿ ಅಪಾಯಕಾರಿಯಾಗುವುದನ್ನು ಆಯೋಗದ ಪ್ರಮುಖರು ಗುರುತುಮಾಡಿರುವರು.



