ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 224 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 343 ಮಂದಿ ಗುಣಮುಖರಾಗಿದ್ದಾರೆ. 213 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ.
ಜಿಲ್ಲೆಯಲ್ಲಿ ಕಣ್ಗಾವಲು ಇರುವ ಒಟ್ಟು ಸಂಖ್ಯೆ 4624, ಮನೆಗಳಲ್ಲಿ 3468 ಮತ್ತು ಸಂಸ್ಥೆಗಳಲ್ಲಿ 1156 ಸೇರಿವೆ. 208 ಹೊಸ ಜನರನ್ನು ಮೇಲ್ವಿಚಾರಣೆ ಮಾಡಲಾಯಿತು. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ 1537 ಹೊಸ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 377 ಜನರ ಪರೀಕ್ಷಾ ಫಲಿತಾಂಶ ಇನ್ನೂ ಬಂದಿಲ್ಲ. 492 ವೀಕ್ಷಣಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 208 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ 423 ಜನರನ್ನು ಬಿಡುಗಡೆ ಮಾಡಲಾಗಿದೆ. ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ 142 ಕ್ಕೆ ಏರಿದೆ. ಪ್ರಸ್ತುತ 3626 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 2222 ಕುಟುಂಬಗಳು ಚಿಕಿತ್ಸೆ ಪಡೆಯುತ್ತಿವೆ.
ವಿವಿಧ ಪಂಚಾಯತಿವಾರು ಇಂದಿನ ಸೋಂಕು ದೃಢಪಟ್ಟವರ ವಿವರ:
ಅಜಾನೂರ್ -10, ಬೇಡಡ್ಕ -1, ಚೆಮ್ಮನಾಡ್- 14, ಚೆಂಗಳ- 3, ಚೆರ್ವತ್ತೂರು -12, ಈಸ್ಟ್ ಎಳೇರಿ -10, ಕೋಡೋಂಬೆಳ್ಳೂರು-7, ಕಳ್ಳಾರ್ -6, ಕಾಞಂಗಾಡ್ -29, ಕಾರಡ್ಕ-2, ಕಾಸರಗೋಡು -18, ಕಯ್ಯೂರು-ಚಿಮೆನಿ -4, ಕಿನಾನೂರ್ ಕರಿಂದಳ -3, ಕುಂಬಳೆ -3, ಮಧೂರು-4, ಮಡಿಕೈ-1, ಮೊಗ್ರಾಲ್ ಪುತ್ತೂರು -6, ಮುಳಿಯಾರ್ -11, ನಿಲೇಶ್ವರ -22, ಪಡನ್ನ-6, ಪಳ್ಳಿಕ್ಕೆರೆ -13, ಪನತ್ತಡಿ-4, ಪಿಲಿಕೋಡ್ -5, ಪುಲ್ಲೂರ್ ಪೆರಿಯಾ -11, ತ್ರಿಕ್ಕರಿಪುರ -7, ಉದುಮ -9, ವರ್ಕಾಡಿ -1, ವೆಸ್ಟ್ ಎಳೇರಿ -1, ಇತರ ಜಿಲ್ಲೆ- ಕರಿವೆಳ್ಳೂರು -1 ಎಂಬಂತೆ ಸೋಂಕು ದೃಢಪಟ್ಟಿದೆ.
ಇಂದು ಕೋವಿಡ್ ಋಣಾತ್ಮಕವಾಗಿರುವವರ ಪಂಚಾಯತಿವಾರು ಮಾಹಿತಿ:
ಅಜಾನೂರ್ 39, ಬದಿಯಡ್ಕ 2, ಬಳಾಲ್ 13, ಬೇಡಡ್ಕ 8, ಚೆಮ್ಮನಾಡ್ 13, ಚೆರ್ವತ್ತೂರು 23, ದೇಲಂಪಾಡಿ 2, ಎಣ್ಮಕಜೆ 8, ಕಳ್ಳಾರ್ 13, ಕಾಞಂಗಾಡ್ 46, ಕಾಸರಗೋಡು 15, ಕಯ್ಯೂರು-ಚೀಮೆನಿ 5, ಕಿನಾನೂರ್ ಕರಿಂದಳ 9, ಕೋಡೋಬೆಳ್ಳೂರು 14, ಕುಂಬಳೆ 2, ಕುತ್ತಿಕ್ಕೋಲ್ 3, ಮಧೂರು 9, ಮಡಿಕೈ 11, ಮಂಗಲ್ಪಾಡಿ 7, ಮಂಜೇಶ್ವರ 3, ಮೀಂಜ 3, ಮೊಗ್ರಾಲ್ ಪುತ್ತೂರು 3, ಮುಳಿಯಾರ್ 7, ನೀಲೇಶ್ವರ 4, ಪಡನ್ನ 11, ಪೈವಳಿಕೆ 1, ಪಳ್ಳಿಕ್ಕೆರೆ 17, ಪನತ್ತಡಿ 14, ಪಿಲಿಕೋಡ್ 9, ಪುಲ್ಲೂರ್ ಪೆರಿಯಾ 12, ಪುತ್ತಿಗೆ 1, ತ್ರಿಕ್ಕರಿಪುರ 11, ಉದುಮ 4, ವಲಿಯಪರಂಬ 5, ವೆಸ್ಟ್ ಎಳೇರಿ 1, ಇತರ ಜಿಲ್ಲೆ-ಪಾಪ್ಪನಾಶ್ಚೇರಿ 1 ಎಂಬಂತೆ ಋಣಾತ್ಮಕರಾದ ವಿವರಗಳಾಗಿವೆ.


