ಕಾಸರಗೋಡು: ಜ್ಯೂಸ್, ಕಾಫಿ, ಚಹಾ ಇತ್ಯಾದಿ ಮಾರಾಟ ನಡೆಸುತ್ತಿರುವ ಬೇಕರಿಗಳನ್ನು ಸಂಜೆ 6 ಗಂಟೆಗೆ ಮುಚ್ಚುಗಡೆ ನಡೆಸಬೇಕು ಎಂದು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆ ಆದೇಶಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಅಧ್ಯಕ್ಷತೆಯಲ್ಲಿ ವೀಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಸಭೆಯಲ್ಲಿ ಈ ವಿಚಾರ ನಿರ್ಧರಿಸಲಾಗಿದೆ.
ಮಂಗಳವಾರ ನಡೆದಿದ್ದ ವ್ಯಾಪಾರಿ ವ್ಯವಸಾಯಿ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲೂ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೂ ಚಹಾ, ಕಾಫಿ ಸಹಿತ ಪಾನೀಯ ಮಾರಾಟ ನಡೆಸುವ ಕೆಲವು ಬೇಕರಿಗಳು ಸಂಜೆ 6 ಗಂಟೆಯ ನಂತರವೂ ಚಟುವಟಿಕೆ ನಡೆಸುತ್ತಿದ್ದುದು ವರದಿಯಾಗಿರುವ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಪೆÇಲೀಸರು ಕ್ರಮ ಕೈಗೊಳ್ಳುವರು. ಇತರ ಅಂಗಡಿಗಳಲ್ಲೂ, ಪಾನೀಯ ಮಾರಾಟ ನಡೆಸದೇ ಇರುವ ಬೇಕರಿಗಳೂ ರಾತ್ರಿ 9 ಗಂಟೆ ವರೆಗೆ ಚಟುವಟಿಕೆ ನಡೆಸಬಹುದು ಎಂದು ಸಭೆ ತಿಳಿಸಿದೆ.
ಆದರೆ ಅಂಗಡಿಗಳಲ್ಲಿ ಮಾಲೀಕರು, ಸಿಬ್ಬಂದಿ ಕಡ್ಡಾಯವಾಗಿ ಗ್ಲೌಸ್, ಮಾಸ್ಕ್, ಕಡ್ಡಾಯವಾಗಿ ಧರಿಸಬೇಕು. ಸೆಕ್ಟರ್ ಮೆಜಿಸ್ಟ್ರೇಟ್ ರ್, ಪೆÇಲೀಸರು, ಮಾಸ್ಟರ್ ಯೋಜನೆಯ ಶಿಕ್ಷಕರು ಇವರಲ್ಲಿ ಯಾರಾದರೂ ಮಾಲೀಕ, ಸಿಬ್ಬಂದಿ ಗ್ಲೌಸ್, ಮಾಸ್ಕ್ ಧರಿಸದೇ ಇರುವುದನ್ನು ಪತ್ತೆ ಮಾಡಿದಲ್ಲಿ ಅಂಗಡಿ ಮುಚ್ಚುಡೆ ನಡೆಸಲು ಸಭೆ ನಿರ್ಧರಿಸಿದೆ.
ಗೂಡಂಗಡಿಗಳು ಕೋವಿಡ್ ಸಂಹಿತೆಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಪಾರ್ಸೆಲ್ ವಿತರಣೆ ನಡೆಸಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಅಂಗಡಿ ತೆರವು ಸಹಿತ ಕ್ರಮ ಕೈಗೊಳ್ಳಲು ಕಂದಾಯ-ಪೆÇಲೀಸ್ ಸಿಬ್ಬಂದಿಗೆ ಹೊಣೆ ನೀಡಲಾಗಿದೆ.
ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪ ಜಿಲ್ಲಾಧಿಕಾರಿ ಮೇಘಶ್ರೀ, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಮೊದಲಾದವರು ಉಪಸ್ಥಿತರಿದ್ದರು.


