ತಿರುವನಂತಪುರ: ಕೋವಿಡ್ ತೀವ್ರತೆಯ ಭೀತಿಯ ಮಧ್ಯೆ ಇಂದು ರಾಜ್ಯಾದ್ಯಂತದ ವಿವಿಧ ಜಿಲ್ಲೆಗಳ ಸಮಗ್ರ ವರದಿಯನುಸಾರ 6244 ಮಂದಿಗೆ ಕೋವಿಡ್ ದೃಢಪಡಿಸಲಾಗಿದೆ.
ಕೋವಿಡ್ ಧನಾತ್ಮಕ ಪ್ರಕರಣಗಳ ಜಿಲ್ಲಾವಾರು ವಿವರ:
ಇಂದು ಹೆಚ್ಚಿನ ಸೋಂಕಿತರು ಮಲಪ್ಪುರಂ ಜಿಲ್ಲೆಯಲ್ಲಿ ಗುರುತಿಸಲಾಗಿದ್ದು 1013 ಮಂದಿಗೆ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 793, ಕೋಝಿಕೋಡ್ 661, ತ್ರಿಶೂರ್ 581, ತಿರುವನಂತಪುರ 581, ಕೊಲ್ಲಂ 551, ಆಲಪ್ಪುಳ 456, ಪಾಲಕ್ಕಾಡ್ 364, ಕೊಟ್ಟಾಯಂ 350, ಕಣ್ಣೂರು 303, ಕಾಸರಗೋಡು 224,ಪತ್ತನಂತಿಟ್ಟು 169, ಇಡುಕ್ಕಿ 114, ವಯನಾಡು 84 ಎಂಬಂತೆ ಸೋಂಕು ಪತ್ತೆಯಾಗಿದೆ.
ಸೋಂಕುಮುಕ್ತರಾದವರ ಜಿಲ್ಲಾವಾರು ವಿವರ:
7792 ಜನರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ತಿರುವನಂತಪುರ 871, ಕೊಲ್ಲಂ 625, ಪತ್ತನಂತಿಟ್ಟು 321, ಆಲಪ್ಪುಳ 574, ಕೊಟ್ಟಾಯಂ 143, ಇಡುಕ್ಕಿ 155, ಎರ್ನಾಕುಳಂ 823, ತ್ರಿಶೂರ್ 631, ಪಾಲಕ್ಕಾಡ್ 449, ಮಲಪ್ಪುರಂ 1519, ಕೊಝಿಕ್ಕೋಡ್ 836, ವಯನಾಡ್ 66, ಕಣ್ಣೂರು 436, ಕಾಸರಗೋಡು 343 ಎಂಬಂತೆ ಚಿಕಿತ್ಸೆಯಲ್ಲಿದ್ದವರು ಗುಣಮುಖರಾದರು.
20 ಮಂದಿ ಮೃತ್ಯು:
ಆರೋಗ್ಯ ಇಲಾಖೆಯ ಮಾಹಿತಿಯಂತೆ ಕೋವಿಡ್ ಬಾಧಿಸಿ ಮೃತಪಟ್ಟವರು ಇಂದು 20 ಮಂದಿ ಎಂದು ಘೋಶಿಸಲಾಗಿದೆ. ತಿರುವನಂತಪುರದ ಕೋವಲಂನ ರಾಜನ್ ಚೆಟ್ಟಿಯಾರ್ (76), ಅಂಚುತೆಂಗುವಿನ ಗಿನೋ (62), ಪೋರ್ಟ್ ನಿವಾಸಿ ಕೃಷ್ಣಂಕುಟ್ಟಿ (80), ಆರ್ಯನಾಡ್ ನ ಒಮಾನಾ (68), ವಳ್ಳುಕ್ಕಾಲ್ ನ ಅಮಲಾ ಔಸೆಪ್ (67), ಪಾರಶಾಲಾದ ಜಯಮತಿ ವಿಜಯಕುಮಾರಿ (61), ಕೊಲ್ಲಂ ಕಾವನಾಡಿನ ಶಾಂತಮ್ಮ (80), ಆಲಪ್ಪುಳ ಚೇರ್ತಲದ ರಾಧಾಮಣಿ (69), ಪಲ್ಲಾನಾದ ಯೂನಸ್ ಕುಂಞÂ (69), ಎರ್ನಾಕುಲಂನ ಪಟೇಲ್ ಮಾರುಕಟ್ಟೆಯ ಎಂ.ಎಸ್. ಜೋನ್(84), ತ್ರಿಪುಣಿತ್ತರಾದ ಕೇಶವ ಪೆÇದುವಾಳ್ (90),ಮಲಪ್ಪುರಂ ಪಾಲಂಗಾಡ್ ನ ಚಂದ್ರನ್ (50), ಮುತ್ತುವಳ್ಳೂರ್ ನ ಅಲಿಕುಟ್ಟಿ (87), ಅರಿಕ್ಕೋಡ್ ನ ಮಿಸಿಯಾ ಫಾತಿಮಾ (5 ತಿಂಗಳು), ಚುಳ್ಳಿಪ್ಪಾರಾದ ಅಬ್ದುರಹ್ಮಾನ್ (56), ಕುರುವಾ ದ ಅಬೂಬಕರ್ (69) ತಾಳೆಕೋಡ್ ನ ಕುಂಜನ್ (80), ಕೋಝಿಕ್ಕೋಡ್ ವಾವಾಡ್‍ನ ಮೊಹಮ್ಮದ್ (85), ಕೋಝಿಕ್ಕೋಡ್ ನ ಸೈದಾಲಿಕುಟ್ಟಿ (72), ಕಣ್ಣೂರು ಪುನ್ನಾಡ್ ನ ಕುಮಾರನ್ (70) ಎಂಬವರು ಸೋಂಕಿನಿಂದ ಮೃತಪಟ್ಟವರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 1,066 ಮಂದಿ ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ.
ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ:
ಕೋವಿಡ್ ಬಾಧಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ಮುಂದುವರೆದಿದೆ. ಸಂಪರ್ಕ ಮತ್ತು ರೋಗನಿರ್ಣಯ ಮಾಡದ ಸೋಂಕುಗಳ ಮೂಲಕ ಕೋವಿಡ್ ಪ್ರಕರಣಗಳು ತಡೆಗಟ್ಟುವ ಕ್ರಮಗಳಿಗೆ ಹಿನ್ನಡೆಯಾಗಿದೆ. ಪ್ರತಿದಿನವೂ ಸೋಂಕಿನಿಂದ ಚೇತರಿಸಿಕೊಳ್ಳುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ, ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಹರಡುತ್ತಿರುವುದು ಹೆಚ್ಚುತ್ತಿದೆ. ಕೋವಿಡ್ ಪ್ರಕರಣಗಳ ಹೆಚ್ಚಳದೊಂದಿಗೆ, ಮನೆಯಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ಗೊಳಗಾದವರ ಸಂಖ್ಯೆ ಹೆಚ್ಚಳಗೊಂಡಿದೆ. ಹಾಟ್‍ಸ್ಪಾಟ್‍ಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.
ಗುಣಮುಖರಾಗುವ ಸಂಖ್ಯೆಯಲ್ಲಿ ಹೆಚ್ಚಳ:
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ, ರೋಗದಿಂದ ಚೇತರಿಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ತಿರುವನಂತಪುರ, ಕೋಝಿಕ್ಕೋಡ್, ಎರ್ನಾಕುಳಂ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ದೈನಂದಿನ ಕೋವಿಡ್ ಅಂಕಿಅಂಶಗಳು ಏರುಗತಿಯಲ್ಲಿದೆ. ಈ ಜಿಲ್ಲೆಗಳಲ್ಲಿ ರೋಗದಿಂದ ಚೇತರಿಸಿಕೊಳ್ಳುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ, ಸಾವುಗಳು ವರದಿಯಾಗುತ್ತಿವೆ. ತಿರುವನಂತಪುರ ಜಿಲ್ಲೆಯ ಪರಿಸ್ಥಿತಿ ಗಂಭೀರವಾಗಿದೆ.
ದೇಶದ ಕೋವಿಡ್ ಸ್ಥಿತಿಗತಿ:
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 72 ಲಕ್ಷ ದಾಟಿದೆ. ಸೋಂಕಿತರು ಮತ್ತು ಸಾವುಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ. ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 72,39,390 ಕ್ಕೆ ಏರಿದೆ. ದೇಶದಲ್ಲಿ ಪ್ರಸ್ತುತ 8,26,876 ಸಕ್ರಿಯ ಪ್ರಕರಣಗಳಿವೆ. ಗುಣಪಡಿಸಿದ 63,01,928 ಜನರಲ್ಲಿ 1,09,856 ಜನರು ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ದೇಶದಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಸಾವುಗಳು ವರದಿಯಾಗಿವೆ.


