HEALTH TIPS

ಆದ್ಯತೆ ಮೇರೆಗೆ ಲಸಿಕೆ ನೀಡಲು 30 ಕೋಟಿ ಮಂದಿಯ ಪಟ್ಟಿಗೆ ಸಿದ್ಧತೆ; ರಾಜ್ಯಗಳಿಂದ ಪ್ರತ್ಯೇಕ ಪಟ್ಟಿ ಬೇಡ ಎಂದ ಕೇಂದ್ರ ಸರ್ಕಾರ

       ನವದೆಹಲಿ: ಕೊರೋನಾ ವೈರಸ್​ಗೆ ಲಸಿಕೆ ಸಿದ್ಧವಾಗುತ್ತಿರುವಂತೆಯೇ ಕೇಂದ್ರ ಸರ್ಕಾರ ಅದರ ವಿಲೇವಾರಿಗೆ ಈಗಿನಿಂದಲೇ ತಯಾರಿ ನಡೆಸುತ್ತಿದೆ. ಲಸಿಕೆ ಅನುಮೋದನೆಗೊಂಡು ಉತ್ಪಾದನೆ ಪ್ರಾರಂಭವಾದ ಕೂಡಲೇ ಅದನ್ನು ವಿತರಿಸಲು ಸರ್ಕಾರ ಆದ್ಯತಾ ಗುಂಪುಗಳನ್ನ ಗುರುತಿಸುತ್ತಿದೆ. ಲಸಿಕೆ ಲಭ್ಯವಾಗುತ್ತಿದ್ದಂತೆಯೇ ಈ ಆದ್ಯತಾ ಗುಂಪುಗಳಿಗೆ ನೇರವಾಗಿ ವಿಲೇವಾರಿ ಮಾಡುವುದು ಕೇಂದ್ರದ ಕಾರ್ಯತಂತ್ರವಾಗಿದೆ. ಅದಕ್ಕಾಗಿ ರಾಜ್ಯ ಮತ್ತು ಜಿಲ್ಲೆಗಳ ಸಹಾಯ ಪಡೆದುಕೊಳ್ಳಲಿದೆ. ಈ ಆದ್ಯತಾ ಗುಂಪುಗಳ ಮೂಲಕ ಜನರಿಗೆ ವ್ಯಾಕ್ಸಿನ್ ಹಾಕಲಾಗುತ್ತದೆ. ಆದರೆ, ರಾಜ್ಯ ಸರ್ಕಾರಗಳು ಲಸಿಕೆ ಪಡೆಯಲು ತಮ್ಮದೇ ಹಾದಿ ತುಳಿಯದಂತೆಯೂ ಕೇಂದ್ರ ಸರ್ಕಾರ ಸೂಚಿಸಿದೆ.
      ಲಸಿಕೆ ವಿಲೇವಾರಿಯ ಆರಂಭಿಕ ಹಂತಕಕ್ಕಾಗಿ 30 ಕೋಟಿ ಮಂದಿಯ ಪಟ್ಟಿ ತಯಾರಿಸುವ ಕಾರ್ಯ ನಡೆಯುತ್ತಿದೆ. ಇವರಿಗೆ ಆದ್ಯತೆಯ ಮೇರೆಗೆ ಮೊದಲಿಗೆ ಚುಚ್ಚುಮದ್ದು ನೀಡಲಾಗುತ್ತದೆ. ನಾಲ್ಕು ವರ್ಗದ ಜನರಿಗೆ ಆದ್ಯತೆ ನೀಡಲಾಗುತ್ತಿದೆ. ಸುಮಾರು ಒಂದು ಕೋಟಿ ಸಂಖ್ಯೆಯಲ್ಲಿರುವ ವೈದ್ಯಕೀಯ ವಿದ್ಯಾರ್ಥಿಗಳು, ನರ್ಸ್, ಆಶಾ ಕಾರ್ಯಕರ್ತರು ಮೊದಲಾದ ಆರೋಗ್ಯ ಕಾರ್ಯಕರ್ತರದ್ದು ಒಂದು ವರ್ಗ. ಫ್ರಂಟ್​ಲೈನ್ ವರ್ಕರ್ಸ್ ಎನ್ನಲಾಗುವ ಪೌರಕಾರ್ಮಿಕರು, ಪೊಲೀಸರು, ಸೇನಾಪಡೆ ಅವರದ್ದು ಎರಡನೇ ವರ್ಗ. ಇವರ ಸಂಖ್ಯೆ ಸುಮಾರು 2 ಕೋಟಿ ಇದೆ. ಹಾಗೆಯೇ, 50 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ 26 ಕೋಟಿ ಜನರದ್ದು ಮೂರನೇ ವರ್ಗ. 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಬೇರೆ ಬೇರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರದ್ದು ನಾಲ್ಕನೇ ವರ್ಗ. ಈ ನಾಲ್ಕು ವರ್ಗಗಳ ಜನರ ಪಟ್ಟಿ ತಯಾರಿಸಲು ರಾಜ್ಯ ಸರ್ಕಾರಗಳ ಸಹಾಯ ಪಡೆಯಲಾಗುತ್ತಿದೆ. ಇವರೆಲ್ಲರಿಗೂ ಲಸಿಕೆ ಉಚಿತವಾಗಿ ಸಿಗಲಿದೆ.
     ಲಸಿಕೆ ಸಮರ್ಪಕವಾಗಿ ವಿತರಣೆ ಮಾಡುವ ಉದ್ದೇಶದಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಸಾರ್ವತ್ರಿಕ ಚುಚ್ಚುಮದ್ದು ಯೋಜನೆಯ (ಯುಐಪಿ) ಜಾರಿಗೆ ಇರುವ ಪ್ರಕ್ರಿಯೆಗಳಲ್ಲಿ ಸುಧಾರಣೆಗಳನ್ನ ತರಲಾಗುತ್ತಿದೆ. ಲಸಿಕೆ ಸಂಗ್ರಹಿಸಿಟ್ಟುಕೊಳ್ಳಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆ, ಚುಚ್ಚುಮದ್ದು ನೀಡುವವರಿಗೆ (ವ್ಯಾಕ್ಸಿನೇಟರ್ಸ್) ಆನ್​ಲೈನ್​ನಲ್ಲಿ ತರಬೇತಿ ಇತ್ಯಾದಿ ಕಾರ್ಯಗಳು ನಡೆಯುತ್ತಿವೆ. ಲಸಿಕೆ ಸಂಗ್ರಹದ ಪ್ರಮಾಣ ಹಾಗೂ ಕೋಲ್ಡ್ ಸ್ಟೋರೇಜ್​ನ ಉಷ್ಣಾಂಶ ಇತ್ಯಾದಿ ವಿವರಗಳನ್ನ ರಿಯಲ್ ಟೈಮ್​ನಲ್ಲಿ ಕೊಡುವ ಇ-ವಿಐಎನ್ ಎಂಬ ಡಿಜಿಟಲ್ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries