ಮಂಗಳೂರು: ಟೀಮ್ ಮಂಜುಶ್ರೀ ತುಳುವೆರ್ ತುಳುನಾಡ್ ಸಂಸ್ಥೆಯ ವತಿಯಿಂದ ಬಡವು ಯೋಜನೆಯ ಎರಡು ಮತ್ತು ಮೂರನೆಯ ಸೇವಾ ಕಾರ್ಯಕ್ರಮ ನಡೆಯಿತು.
ಮಂಗಳೂರು ಶಕ್ತಿನಗರ ಸಮೀಪದ ರಾಜೀವ್ ನಗರದ ಆದಿಮಣಿ ಎಂಬುವವರ ಕುಟುಂಬಕ್ಕೆ ಮತ್ತು ತುಂಬೆಯ ರಾಮಲ್ ಕಟ್ಟೆ ಸಮೀಪದ ಶಾಂತಿ ಆಚಾರ್ಯ ಎಂಬುವವರ ಕುಟುಂಬಕ್ಕೆ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಜರಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ಪದವು ವಾರ್ಡ್ ಕಾಪೆರ್Çೀರೇಟರ್ ಕಿಶೋರ್ ಕೊಟ್ಟಾರಿ, ಕದ್ರಿ ವಾರ್ಡ್ ಕಾಪೆರ್Çೀರೇಟರ್ ಮನೋಹರ್ ಶೆಟ್ಟಿ ಕದ್ರಿ, ತುಂಬೆ ಗ್ರಾಮ ಪಂಚಾಯತ್ ಪಿಡಿಓ ಚಂದ್ರಾವತಿ ಆಗಮಿಸಿದರು. ಕಾರ್ಯಕ್ರಮಕ್ಕೆ ಮಹಾಪೆÇೀಷಕರುಗಳಾದ ಕಿಶೋರ್ ಡಿ.ಶೆಟ್ಟಿ, ರಾಘವೇಂದ್ರ ರಾವ್, ನವೀನ್ ಶೆಟ್ಟಿ ಅಳಕೆ, ಚಂದ್ರಶೇಖರ್, ವಿಕ್ರಮ್ ಸಹಕಾರ ನೀಡಿದರು. ಸೇವಾ ಕಾರ್ಯದಲ್ಲಿ ಸಂಸ್ಥೆಯ ಸಂಸ್ಥಾಪಕಾ ಅಧ್ಯಕ್ಷರು ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕ ಉಪಾಧ್ಯಕ್ಷರು ವಂಶಿ ಪಂಡಿತ್ ಮಂಗಳೂರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂಸ್ಥೆಯ ಜೊತೆ ಕಾರ್ಯದರ್ಶಿ ರಿತೇಶ್ ಕುಲಾಲ್ ಸಂಸ್ಥೆಯ ಹಿರಿಯ ಸಲಹೆಗಾರರು ರಾಧಾಕೃಷ್ಣ ಮಾನ್ಯ, ಪ್ರಚಾರ ಸಮಿತಿ ಅಧ್ಯಕ್ಷರು ಚಂದ್ರೇಶ್ ಮಾನ್ಯ, ಸಂಸ್ಥಾಪಕರಾದ ಪುಷ್ಪರಾಜ್ ರಾವ್, ಸದಸ್ಯರುಗಳಾದ ವಿಕೇಶ್ ಕುಲಾಲ್, ರಜನೀಶ್ ಅಶ್ವ, ರಕ್ಷಿತ್ ಕುಲಾಲ್, ಲತೇಶ್ ಕಣ್ಣೂರು, ಧನರಾಜ್.ಟಿ ಉಪಸ್ಥಿತರಿದ್ದರು.


