ಕಾಸರಗೋಡು: ಹಸಿರು ಕೇರಳ ಮಿಷನ್ ಸ್ಥಳೀಯಾಡಳಿತ ಸಂಸ್ಥೆಗಳ ಸಹಬಾಗಿತ್ವದೊಂದಿಗೆ ಆರಂಭಿಸಿರುವ ಹಸಿರು ದ್ವೀಪ ಯೋಜನೆಯ ಮೊದಲ ಹಂತದಲ್ಲಿಮಡಿಕೈ ಗ್ರಾಮ ಪಂಚಾಯಿತಿಯ 15 ವಾರ್ಡ್ ಗಳಲ್ಲಿ 24 ಹಸಿರು ದ್ವೀಪಗಳನ್ನು ನಿರ್ಮಿಸಲಾಗಿದೆ. ಇನ್ನೂ 10 ಹಸಿರುದ್ವೀಪಗಳ ನಿರ್ಮಾಣಗುರಿ ಹೊಂದಿರುವ ಪಂಚಾಯಿತಿ, ಹಸಿರುವನ ನಿರ್ಮಾಣಕಾರ್ಯದಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ.
ಇನ್ನೂ 10 ಹಸುರು ದ್ವೀಪಗಳ ನಿರ್ಮಾಣಕ್ಕೆ ಮಡಿಕೈ ಗ್ರಾಮ ಪಂಚಾಯಿತಿ ಗುರಿಯಿರಿಸಿದ್ದು, ಗ್ರಾಮ ಪಂಚಾಯಿತಿಯ ವಿವಿಧ ಭಾಗಗಳಲ್ಲಿ ಸುಮಾರು 70 ಕಿರುವನಗಳನ್ನು ನಿರ್ಮಿಸುವ ಯೋಜನೆಯಿರಿಸಿಕೊಂಡಿದೆ.
ಹಸಿರು ಕೇರಳ ಮಿಷನ್ ನೇತೃತ್ವದಲ್ಲಿ ಹಸುರು ದ್ವೀಪ ನಿರ್ಮಾಣಗೊಳ್ಳಲಿವೆ. ಸ್ಥಳೀಯ ಬನಗಳು, ಅರಣ್ಯ ಇತ್ಯಾದಿಯನ್ನು ಈ ಯೋಜನೆಯಡಿ ತಂದು ಸಂರಕ್ಷಿಸುವ ಯೋಜನೆಯನ್ನೂ ಗ್ರಾಮ ಪಂಚಾಯಿತಿ ಹೊಂದಿದೆ.





