ಪೆರ್ಲ : ಭಾರತೀಯ ಅಂಚೆ ಇಲಾಖೆಯ ಪೆರ್ಲ ಅಂಚೆ ಕಚೇರಿಯಲ್ಲಿ ಕಳೆದ 42ವರ್ಷಗಳಿಂದ ಗ್ರಾಮೀಣ ಡಾಕ್ ಸೇವಕ್ ಪೋಸ್ಟ್‍ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನಾರಾಯಣ ಪೂಜಾರಿ ಬಜಕೂಡ್ಲು ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ.
ಪೆರ್ಲ ಅಂಚೆ ಕಚೇರಿಯಲ್ಲಿ ಈ ಬಗ್ಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಪೆರ್ಲ ಅಂಚೆಕಚೇರಿಯ ಸಬ್ ಪೋಸ್ಟ್ ಮಾಸ್ಟರ್ ಗೋವಿಂದ ನಾಯ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ನಾರಾಯಣಪೂಜಾರಿ-ನಿರ್ಮಲಾ ದಂಪತಿಯನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ, ಫಲಪುಷ್ಪ ನೀಡಿ ಗೌರವಿಸಲಾಯಿತು. ಅಂಚೆಕಚೇರಿ ಸಹಾಯಕ ಮುರಳೀಧರ ಭಟ್ ಬದಿಯಡ್ಕ, ಅಂಚೆ ಕಚೇರಿ ಸಿಬ್ಬಂದಿ ಸುಬ್ರಾಯ ನಾಯಕ್ ಶೇಣಿ, ಜಗದೀಶ್ ಆಚಾರ್ಯ, ಕಮಲಾ ಕಾಟುಕುಕ್ಕೆ, ಚಿತ್ರಿಕಾ ಪೆರ್ಲ ಉಪಸ್ಥಿತರಿದ್ದರು. ಕೀರ್ತನ್‍ಕುಮಾರ್ ಕಾಟುಕುಕ್ಕೆ ಸ್ವಾಗತಿಸಿದರು. ದಾಮೋದರ ಬಜಕೂಡ್ಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





